ಅಖಂಡ ಕರ್ನಾಟಕ ಬೇರ್ಪಡಿಸುವುದು ಪಾಪದ ಕೆಲಸ: ಸಚಿವ ದೇಶಪಾಂಡೆ

0
6
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ. ಅಖಂಡ ಕರ್ನಾಟಕದ ವಿಭಜನೆ ಕುರಿತು ಮಾತನಾಡುವುದೇ ಪಾಪದ ಕೆಲಸ ಅಂತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಇನ್ನಷ್ಟು ಆಗಬೇಕಿದೆ, ಅದಕ್ಕೆ ಪಕ್ಷಗಳ, ಜನರ ಸಹಕಾರ ಮುಖ್ಯ. ಉತ್ತರ ಕರ್ನಾಟಕದಲ್ಲಿನ ಬಡತನ, ನಿರುದ್ಯೋಗ ನೀಗಬೇಕಿದೆ ಅಭಿವೃದ್ಧಿಗೆ ಬಿಗಡೆಯಾದ ಹಣ ಸೂಕ್ತ ರೀತಿಯಲ್ಲಿ ಉಪಯೋಗವಾಗಬೇಕು ಎಂದರು. ಹೈ ಕ ಅಭಿವೃದ್ಧಿ ಗೆ 371ಜೆ ಅನುಷ್ಠಾನಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದೆವು, ಬಿಜೆಪಿಯವರು ಏಕೆ ತರಲಿಲ್ಲ ಅಂತ ಬಿಜೆಪಿಗರಿಗೆ ಟಾಂಗ್ ಕೊಟ್ಟರು. ಪ್ರಗತಿಗೆ ಪಕ್ಷಭೇದವಿಲ್ಲ ಉತ್ತರ ಕರ್ನಾಟಕ ಅಭಿವೃದ್ಧಿ ಗೆ ಸಿಎಂ ಕೆಲವು ಉತ್ತಮ ವಿಚಾರಗಳನ್ನು ಹೊಂದಿದ್ದಾರೆ ಕಾಂಗ್ರೆಸ್ ಮುಖಂಡರು ಸಹ ಸಿಎಂ ಜೊತೆ ಪ್ರಗತಿಪರ ಕರ್ನಾಟಕ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

loading...