ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಕೆ

0
3
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಕವಿ ಹೃದಯ ಹೊಂದಿದ್ದರು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಗುರುವಾರ ನಿಧನರಾದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬಿಜೆಪಿಯಿಂದ ಗಾಂಧಿ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೌನಾಚರಣೆ ಮಾಡಿ ಅವರು ಮಾತನಾಡಿದರು.ಅಟಲ್ಜಿ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇಶದ ಧ್ರುವತಾರೆ, ಅಜಾತ ಶತ್ರುವಿನಂತೆ ಇದ್ದ ಅಟಲ್‍ಜೀಯವರು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ದೇಶದ ಅಭಿವೃದ್ದಿಗೆ ಸಾಕಷ್ಟು ಶ್ರಮವಹಿಸಿದ್ದರು ಎಂದು ಮುನವಳ್ಳಿ ತಿಳಿಸಿದರು.
ದೇಶದಲ್ಲಿ ಪ್ರಥಮಬಾರಿಗೆ ಕಾಂಗ್ರೆಸ್ಸೇತರ ಸರಕಾರ ರಚಿಸಿ ಪೂರ್ಣಾವಧಿ ಆಡಳಿತ ನೀಡಿರುವ ಹೆಮ್ಮೆಯ ಪ್ರಧಾನಿಯಾಗಿದ್ದರು. 12 ಅವಧಿಗಳ ಕಾಲ ಸಂಸದರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ ಮೈತಿನ ಶೈಲಿಯಿಂದ ಉತ್ತಮ ವಾಗ್ಮಿ ಮತ್ತು ಆಡಳಿತಗಾರ ಎಂದು ಹೆಸರು ವಾಸಿಯಾಗಿದ್ದರು. ವಾಜಪೇಯಿ ವಿರೋಧಿಗಳ ಅವರ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡಿದ್ದರು ಎಂದು ಶಾಸಕರು ತಿಳಿಸಿದರು.ಇವರ ಅಗಲಿಕೆ ನಮಗೆ ನೋವು ಉಂಟು ಮಾಡಿದೆ. ಇವರ ಆದರ್ಶಗಳನ್ನು ಮತ್ತು ಸಿದ್ದಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಸಿಂಗನಾಳ ವಿರುಪಾಕ್ಷಪ್ಪ ಮಾತನಾಡಿ ವಾಜಪೇಯಿಯವರ ಸಾಧನೆಗಳನ್ನು ವಿವರಿಸಿದರು. ನರಸಿಂಗರಾವ್ ಕುಲಕರ್ಣಿ, ಹೊಸಕೇರಿ ಪ್ರಭಾಕರ, ಶಿವು ಆದೋನಿ, ಸಿದ್ದಾಪುರ ರಾಚಪ್ಪ, ಶ್ರವಣಕುಮಾರ್ ರಾಯ್ಕರ್, ಜೋಗದ ಹನುಮಂತಪ್ಪನಾಯಕ, ವೀರೇಶ ಬಲ್ಕುಂದಿ, ಲಾಳಗೊಂಡ ಸಮಾಜದ ಮುಖಂಡ ಹೊಸಳ್ಳಿ ಶಂಕರಗೌಡ ಪಾಲ್ಗೊಂಡಿದ್ದರು.

loading...