ಅಜಾತ ಶತ್ರುವಿನ ಅಗಲಿಕೆಗೆ ತೋಂಟದ ಶ್ರೀಗಳ ಸಂತಾಪ

0
6
loading...

ಕನ್ನಡಮ್ಮ ಸುದ್ದಿ-ಗದಗ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲುವಿಕೆಗೆ ಗದುಗಿನ ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಬುದ್ಧ, ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಯಾಗಿದ್ದ ವಾಜಪೇಯಿ, ದೇಶ ಕಂಡ ತತ್ವ ಮೌಲ್ಯಾಧಾರಿತ ರಾಜಕಾರಣಿ ಅಂತೆಯೇ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಪ್ರತಿಷ್ಠಿತ ಪ್ರಶಸ್ತಿಗಳು ವಾಜಪೇಯಿ ಅವರ ಮುಡಿಗೇರುವ ಮೂಲಕ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ, ಅವರೊಬ್ಬ ಭಾರತ ರತ್ನ ಎಂದು ಬಣ್ಣಿಸಿದರು.ರಾಷ್ಟ್ರೀಯ ಕೋಮುಸೌಹಾರ್ದತಾ ಪ್ರಶಸ್ತಿಯನ್ನು ಸ್ವೀಕರಿಸಲು ಹೋದಾಗ ಮುಗ್ದ ಹಾಗೂ ಕವಿ ಹೃದಯದ, ಉತ್ತಮ ವಾಗ್ಮಿ ಮತ್ತು ಬ್ರಹ್ಮಚಾರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಮಾತನಾಡಿದ್ದನ್ನು ತೋಂಟದಾರ್ಯ ಸ್ವಾಮೀಜಿ ಸ್ಮರಿಸಿಕೊಂಡರಲ್ಲದೆ ಅಗಲಿದ ಆತ್ಮಕ್ಕೆ ಚಿರಶಾಂತಿ ಸದ್ಗತಿಯನ್ನು ಕೋರಿದರು.

loading...