ಅಟಲಜಿ ಯವರ ಕಾರ್ಯ ಅಜರಾಮರ : ಮಾಜಿ ಶಾಸಕ ಸಂಜಯ ಪಾಟೀಲ

0
30
loading...

 

ಕನ್ನಡಮ್ಮ ಸುದ್ದಿ- ಬೆಳಗಾವಿ: ಅಟಲ್ ಬಿಹಾರಿ ವಾಜಪೇ ಇವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಅವರ ಶರೀರ ಹೋಗಿದೆ ಆದರೆ ಅವರ ಒಳ್ಳೆಯ ವಿಚಾರ, ಮಾಡಿದ ಕೆಲಸ ಹೋಗಿಲ್ಲ ಎಂದು ಮಾಜಿ‌ ಶಾಸಕ ಸಂಜಯ ಪಾಟೀಲ ‌ಹೇಳಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದ, ಬಸವೇಶ್ವರ ವೃತ್ತದಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇ ಇವರ ಅಸ್ತಿ ಕಲಶವನ್ನು ಭರಮಾಡಿಕೊಂಡು ಪೂಜೆ ಸಲ್ಲಿಸಿ ಮಾತನಾಡಿದರು.

ಮಾಜಿ ಪ್ರಧಾನಿ, ಜನಸಂಘದ ಸಂಸ್ಥಾಪಕರು, ಒಳ್ಳೆಯ ಸಂಸದ ಪಟು, ಜಗತ್ತು ಕಂಡ ಶ್ರೇಷ್ಠ ನಾಯಕ ಅಟಲ್ ಬಿಹಾರಿ ವಾಜಪೇ ಇವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಅವರ ಶರೀರ ಹೋಗಿದೆ ಆದರೆ ಅವರ ಒಳ್ಳೆಯ ವಿಚಾರ, ಮಾಡಿದ ಕೆಲಸ ಹೋಗಿಲ್ಲ, ವಿದೇಶದಲ್ಲಿ ಭಾರತದ ಸಂಸ್ಕೃತಿ, ಭಾರತದ ಧರ್ಮದ ಬಗ್ಗೆ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲನೇಯ ವಿದೇಶಾಂಗ ಸಚಿವರು ಇವರು, ನಮ್ಮಂತಹ ಕಾರ್ಯಕರ್ತರಿಗೆ ಇವರು ಸ್ಫೂರ್ತಿಯಾಗಿದ್ದು, ಬರುವಂತ ದಿನಗಳಲ್ಲಿ ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮವನ್ನು ಉಳಿಸಲಿಕ್ಕೆ ಅವರ ಹಾಕಿದ ಹಾದಿಯಲ್ಲಿ ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಮುಂದಿನ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೊಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಭಾರಿ ಈರಣ್ಣಾ ಕಡಾಡಿ, ರಾಜು ಚಿಕ್ಕನಗೌಡ್ರ, ಮೋಹನ ಅಂಗಡಿ, ಗಿರಿಜಾ ಮಠಪತಿ, ಪಡಿಗೌಡಾ ಪಾಟೀಲ, ಗಟ್ಟೇಶ ಧರೆಣ್ಣವರ, ನಿಜಲಿಂಗ ಮಠಪತಿ, ಮಂಜುನಾಥ ಧರೆಣ್ಣವರ, ಸದಾನಂದ ಬೆಳಗೋಜಿ, ಬಸನಗೌಡಾ ಪಾಟೀಲ, ರಮೇಶ ಸರವದೆ, ಪುಂಡಲಿಕ ಮುರಾರಿ, ಬಸವರಾಜ ಮರಗಿ, ರಾಜು ಕುಂಟೆಣ್ಣವರ, ಸಂತೋಷ ಅಂಗಡಿ, ರಮೇಶ ಅಕ್ಕಿ, ಬಸವರಾಜ ಡಮ್ಮಣಗಿ, ಸನತಕುಮಾರ ವಿ.ವಿ., ಅಭಯ ಅವಲಕ್ಕಿ, ನಾಗರಾಜ ಪಾಟೀಲ, ಶಿವು ಸೋನಪ್ಪನವರ, ಈರಣ್ಣಾ ಅಂಗಡಿ, ನಾಗೇಶ ಇಟಗಿ, ಹರೀಶ ಕುಡಚಿ, ಪವನ ದೇಸಾಯಿ, ರವಿ ಪಾರ್ವತಿ, ಯಲ್ಲೇಶ ಕೋಲಕಾರ, ವಿನಯ ಕದಮ, ಪರಶರಾಮ ತುಪ್ಪಟ, ಜ್ಯೊತಿಬಾ ಮೋರೆ, ಹಣಮಂತ ಪಾಟೀಲ, ಪ್ರಭಾಕರ ವಾಘಮೊರೆ, ವಿನಾಯಕ ಪಾಟೀಲ, ಚೇತನ ಪಾಟೀಲ, ಬಾಪುಸೂ ಪಾಟೀಲ, ನಾಗೇಶ ಯಳ್ಳೂರಕರ ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...