ಅಡೆತಡೆಯಲ್ಲಿ ನಡೆದ ಸ್ಥಳೀಯ ಚುನಾವಣೆ

0
1
loading...

ಅಡೆತಡೆಯಲ್ಲಿ ನಡೆದ ಸ್ಥಳೀಯ ಚುನಾವಣೆ
ಕನ್ನಡಮ್ಮ ಸುದ್ದಿ-ರಾಮದುರ್ಗ: ಪಟ್ಟಣದ ಪುರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಎರಡು ವಾರ್ಡುಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನುಡುವೆ ಮಾತಿನ ಚಕಮಕಿ, ಪೊಲೀಸರ್ ಲಘುಲಾಠಿ ಪ್ರಹಾರ ನಡೆದ್ದಿದ್ದು, ಹೊರತುಪಡಿಸಿ ವಿವಿಧೆಡೆ ಶಾಂತಿಯುವಾಗಿ ಮತದಾನ ನಡೆದಿದ್ದು, ಶೇ. ೬೫.೯೬ ರಷ್ಟು ಮತವಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ ಆರ್.ವಿ.ಕಟ್ಟಿ ತಿಳಿಸಿದ್ದಾರೆ.
೨೭ ವಾರ್ಡುಗಳನ್ನು ಹೊಂದಿದ ರಾಮದುರ್ಗ ಪುರಸಭೆಗೆ ಸುಮಾರು ೭೭ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ೧೫೮೯೩ ಪುರುಷರು, ೧೬೦೯೦ ಮಹಿಳೆಯರು ಸೇರಿದಂತೆ ಒಟ್ಟು ೩೧೯೮೩ ಮತದಾರರ ಪೈಕಿ ೧೦,೬೪೪ ಪುರುಷರು ೧೦,೪೫೧ ಮಹಿಳೆಯರು ಸೇರಿ ಒಟ್ಟು ೨೧,೦೯೫ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೬೫.೯೬ ರಷ್ಟು ಮತದಾನವಾಗಿದೆ.
ವಾರ್ಡ ವಾರು ಮತದಾನ
೧.ಎ ೫೬.೯೦%, ೧.ಬಿ ೫೬.೨೦%, ೨ ೬೮.೯೦%,೩ ಎ ೬೨.೭೧% ೩, ಬಿ ೬೮.೧೦%, ೪. ೭೦.೪೪%,೫. ೬೬.೪೮%,೬ ಎ.೬೫.೩೦%,೬ ಬಿ.೬೧.೭೪%,೭ ಎ.೫೬.೨೫%, ೭ ಬಿ.೫೯.೨೩%೮೭೪.೫೯%,೯.೭೧.೪೮%,೧೦.೭೫.೦೪%,೧೧.೭೦.೦೦%,೧೨.೬೪.೧೨%,೧೩.೫೬.೦೧%,
೧೪.೬೩.೧೫%,೧೫.೭೦.೭೩%೧೬.೬೬.೫೨%,೧೭.೬೮.೨೪%,೧೮.೭೦.೨೧%೧೯.೫೧.೭೩%,೨೦.೬೬.೩೪%,೨೧ ಎ೪೭.೪೯%,೨೨ಬಿ.೫೬.೮೪%,೨೨.೬೭.೪೦%,೨೩ಎ.೫೮.೧೯%,೨೩ಬಿ.೬೪.೫೩%,೨೪.೬೭.೮೮%,೨೫.೭೫.೦೯%,೨೬.೭೪.೨೭%,೨೭.೭೮.೫೪% ೨೭ ವಾರ್ಡಗಳಲ್ಲಿ ಮತದಾನವಾಗಿದೆ
————–ಬಾಕ್ಸ್:————–
ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯ ಮಾತಿನ ಚಕಮಕಿ
ಎಂ.ಎಲ್.ಬಿ.ಸಿ ಸರಸ್ವತಿ ನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ಥಾಪಿಸಿದ ವಾರ್ಡ ನಂ. ೧೯ ರ ೨೩ ನೇ ಮತಗಟ್ಟೆ ಬಳಿ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಅವರ ಬೆಂಬಲಿಗರು ಮತದಾನ ಕೇಂದ್ರದ ಒಳಹೋಗುವುದನ್ನು ಮಾಜಿ ಶಾಸಕ ಅಶೋಕ ಪಟ್ಟಣ ಪ್ರಶ್ನಿಸುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಮಧ್ಯಾಹ್ನದ ವೇಳೆಗೆ ಪಟ್ಟಣದ ವಿದ್ಯಾ ಚೇತನ ಶಾಲಾ ಆವರಣದಲ್ಲಿ ನಿರ್ಮಿಸಿದ ಮತಗಟ್ಟೆಯ ಒಳಗೆ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತದಾನ ಕೇಂದ್ರದಲ್ಲಿ ಇರುವುದನ್ನು ಕಂಡು ಮಾಜಿ ಶಾಸಕ ಅಶೋಕ ಪಟ್ಟಣ ಚುನಾವಣಾಧಿಕಾರಿಗಳಿಗೆ ಮತದಾನ ಕೇಂದ್ರದಲ್ಲಿರುವ ಸಾರ್ವಜನಿಕರನ್ನು ಹೊರ ಹಾಕುವಂತೆ ಆಗ್ರಹಿಸುತ್ತಿದ್ದಂತೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕರನ್ನು ಹೊರಹಾಕಲು ಮುಂದಾಗುತ್ತಿದ್ದಂತೆ ಗದ್ದಲದ ವಾತಾವರಣ ಸೃಷ್ಠಿಯಾಯಿತುಪೀ ವೇಳೆ ಅವರವರ ಕಾರ್ಯಕರ್ತರು ಘೋಷಣೆ ಕೂಗಲು ಪ್ರಾರಂಭಿಸಿದಾಗ ಮತ್ತೆÃ ಗದ್ದಲ ಉಂಟಾಗಿ ಪರಸ್ಥಿತಿ ವಿಕೋಪಕ್ಕೆ ಹೋಗುವದನ್ನು ಅರಿತ ಪೊಲೀಸರು ಕೂಡಲೇ ಲಘುಲಾಠಿ ಬೀಸಿ ಅಲ್ಲಿ ಜಮಾಯಿದ್ದ ಜನರನ್ನು ಚದುರಿಸುವ ಮೂಲಕ ಪರಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ನಂತರ ತಹಶೀಲ್ದಾರರೇ ತಾವೇ ಖುದ್ದಾಗಿ ಶಾಸಕರಿಗೆ ಹಾಗೂ ಮಾಜಿ ಶಾಸಕರಿಗೆ ನಿವ್ಯಾರು ಮತದಾನ ಕೇಂದ್ರಗಳಿಗೆ ಬರುವುದು ಬೇಡ. ನಮ್ಮ ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಮತದಾರರನ್ನು ಹೊರತು ಪಡಿಸಿ ಯಾವುದೇ ಸಾರ್ವಜನಿಕರು ಬರದಂತೆ ನೋಡಿಕೊಳ್ಳುವದಾಗಿ ಹೇಳಿ ತಾವು ಅಲ್ಲಿಂದ ಹೋಗುವಂತೆ ವಿನಂತಿಸಿ, ವಾಹನ ಹತ್ತಿಸಿ ಅವರನ್ನು ಅಲ್ಲಿಂದ ಕಳಿಸಿದ ಘಟನೆ ನಡೆಯಿತು.
ಮತದಾನದಿಂದ ವಂಚಿತರಾದ ಜನ:
ಅವೈಜ್ಞಾನಿಕ ವಾರ್ಡ ವಿಂಗಡನೆಯಿಂದಾಗಿ ಸಾಕಷ್ಟು ಜನರು ಇಂದು ನಡೆದ ಮತದಾನದಿಂದ ವಂಚಿತರಾದ ಪರಸ್ಥಿತಿ ನಡೆಯಿತು. ಸಾಕಷ್ಟು ವರ್ಷಗಳಿಂದ ಮತದಾನ ಮಾಡುತ್ತಾ ಬಂದ ವಾರ್ಡಗಳಲ್ಲಿ ಇಂದು ಮತದಾನ ಮಾಡಲು ಹೋದಾಗ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವ ಕಾರಣ ಮತದಾನದಿಂದ ವಂಚಿತರಾದಗಬೇಕಾಯಿತು. ಇನ್ನೂ ಕೆಲವರು ಅಲ್ಲಿ ಇಲ್ಲಿ ಕೇಳಿದಾಗ ಒಂದೇ ಕುಟುಂಬದಲ್ಲಿನ ಮತಗಳ ಎರಡ್ಮೂರು ವಾರ್ಡಗಳಲ್ಲಿ ಹಂಚಿಕೆಯಾಗಿರುವದು ಕಂಡು ಬಂದಿತು. ಹೀಗಾಗಿ ಎಷ್ಟೊÃ ಜನರು ಅಲ್ಲಿಗೆ ಹೋಗಿ ಎಲ್ಲಿ ಮತದನ ಮಾಡುವದು ಎಂದು ಮತದಾನ ಮಾಡದೇ ಮನೆಗೆ ತೆರಳಿದ ಘಟನೆಗಳು ಕಂಡು ಬಂದವು.

loading...