ಅತ್ಯಾಚಾರ ಯತ್ನ: ಸಾರ್ವಜನಿಕರಿಂದ ಧರ್ಮದೇಟು

0
20
loading...

ರಬಕವಿ-ಬನಹಟ್ಟಿ,- ಬನಹಟ್ಟಿ ವಡ್ಡರ ಗಲ್ಲಿಗೆ ಹೊಂದಿಕೊಂಡಂತೆ ಇರುವ ಕಾಲೋನಿಯಲ್ಲಿನ ಯುವತಿಯೋರ್ವಳ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸುತ್ತಿರುವ ಸಂದರ್ಭದಲ್ಲಿ ಯುವತಿ ಜೋರಾಗಿ ಕೂಗಿದಾಗ, ಆರೋಪಿ ಪರಾರಿಯಾಗಲು ಯತ್ನಿಸಿದ ಘಟನೆ ಬುಧುವಾರ ಮಧ್ಯಾಹ್ನ ಜರುಗಿದೆ.
ಬನಹಟ್ಟಿ ನಗರದ ವಡ್ಡರ ಗಲ್ಲಿಯ ನಿವಾಸಿ ತಮ್ಮಣ್ಣಿ ಪಾತ್ರೊÃಟ (೬೨) ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಈತ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದು, ಅದೇ ಕಾಲೋನಿಯ ನಿವಾಸಿ ಅಂಗವಿಕಲೆ ಮಾನಸಿಕ ಅಸ್ವಸ್ತೆ ಬಸವ್ವಾ ಶೀಲವಂತ (೨೨) ಒಬ್ಬಳೇ ಮನಯಲ್ಲಿದ್ದಾಗ ಒಳ್ಳದ ಕಲ್ಲನ್ನು ಕಟೆದು ದುರಸ್ತಿ ಮಾಡುವ ನೆಪದಲ್ಲಿ ಮನೆಯೊಳಗೆ ಹೋಗಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಚೀರಿದಾಗ ಅಕ್ಕಪಕ್ಕದವರಿಗೆ ವಿಷಯ ತಿಳಿಯುತ್ತಿದ್ದಂತೆ ವೃದ್ದ ಓಡಿಹೋಗಿದ್ದಾನೆ. ಸಾರ್ವಜನಿಕರು ಹುಡುಕಿ ತಂದು ದೇವಸ್ಥಾನದ ಕಂಬಕ್ಕೆ ಕಟ್ಟಿ ಧರ್ಮದೇಟು ತಿನಿಸಿ ನಂತರ ಬನಹಟ್ಟಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

loading...