ಅಧಿಕಾರ ಎಂದಿಗೂ ಶಾಶ್ವತವಲ್ಲ: ಸಂಗಣ್ಣ

0
7
loading...

ಕಲಾದಗಿ: ಅಧಿಕಾರ ಎಂದಿಗೂ ಶಾಶ್ವತವಲ್ಲ ಅಧಿಕಾರದಲ್ಲಿದ್ದಾಗ ನಾವು ಮಾಡಿದ ಒಳ್ಳೆಯ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತದೆ ಎಂದು ತಾ.ಪಂ.ಸದಸ್ಯ ಹಾಗೂ ಕಲಾದಗಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಂಗಣ್ಣ ಮುಧೋಳ ಹೇಳಿದರು. ಇಲ್ಲಿಯ ಗುಡ್ಡದ ಮೇಲೆರುವ ಹಜರತ್ ಸೈಪುದ್ದಿÃನ ಬಾಬಾರವರ ದರ್ಗಾದ ನೂತನ ಮಹಾದ್ವಾರ ಹಾಗೂ ಉರುಸು ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸೈಪುದ್ದಿÃನ ಬಾಬಾರವರು ದೊಡ್ಡ ಪವಾಡ ಪುರುಷರಾಗಿದ್ದು ಈ ದರ್ಗಾಕ್ಕೆ ವಿವಿಧ ಜಿಲ್ಲೆಗಳಿಂದಲ್ಲದೆ ನೆರೆ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಆದ್ದರಿಂದ ಬರುವ ದಿನಗಳಲ್ಲಿ ಮೂಲ ಭೂತ ಸೌಕರ್ಯಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆÃನೆ ಈಗಾಗಲೆ ದ್ವಾರ ಬಾಗಿಲು ಕಾಮಗಾರಿಗೆ ತಾಲೂಕ ಪಂಚಾಯತ ಅನುದಾನ ನಿಡಿದ್ದು ಬರುವ ಬಜೇಟ್‌ನಲ್ಲಿ ದರ್ಗಾ ಆವರಣದಲ್ಲಿ ಭಕ್ತರಿಗೆ ಯಾತ್ರಾ ನಿವಾಸ ನಿರ್ಮಾಣಕ್ಕೆ ೧ ಲಕ್ಷ ನೀಡುವುದಾಗಿ ಬರವಸೆ ನೀಡಿದರು.
ತಾ.ಪಂ.ಉಪಾಧ್ಯಕ್ಷ ಸಲಿಂ ಶೇಖ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಯುವಕರು ಮೋಬೈಲ್, ಇಂಟರನೆಟ್, ವಾಟ್ಸಪಗಳಲ್ಲಿ ತಲ್ಲಿನರಾಗಿದ್ದು ಕುಸ್ತಿಯಂತಹಾ ಗ್ರಾಮೀಣ ಕ್ರಿÃಡೆಗಳು ಮಾಯವಾಗುತ್ತಿವೆ ಕುಸ್ತಿ ಕ್ರಿÃಡೆಯನ್ನು ಜಿವಂತಗೊಳಿಸಲು ಉರುಸು ನಿಮಿತ್ಯವಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದ್ದು ಶ್ಲಾö್ಯಘನೀಯವಾಗಿದೆ ಬರುವ ತಾಲೂಕ ಪಂಚಾಯತ ಅನುದಾನದಲ್ಲಿ ಯಾತ್ರಾ ನಿವಾಸಕ್ಕೆ ನಾನೂ ಕೂಡಾ ೧ ಲಕ್ಷ ನೀಡುವುದಾಗಿ ಹೇಳಿದರು.

ಮಾಜಿ ಗ್ರಾ.ಪಂ ಅಧ್ಯಕ್ಷ ಡಿ.ಡಿ.ದುರ್ವೆ, ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇಧಿಕೆ ಅಧ್ಯಕ್ಷ ಮಲ್ಲಪ್ಪ ಜಮಖಂಡಿ, ಡಾ. ಮುರನಾಳ ಮಾತನಾಡಿದರು. ಹಸನ ಅಹ್ಮದ ರೋಣ, ಗ್ರಾ.ಪಂ ಅಧ್ಯಕ್ಷೆ ತಾರಾಮತಿ ಪಾಟೀಲ, ಹುಸೇನಸಾಬ ನದಾಫ, ತಾಲೂಕಾ ನದಾಫ ಪಿಂಜಾರ ಸಂಘದ ಅಧ್ಯಕ್ಷ ಚಾಂದಸಾಬ ನದಾಫ, ಸುರೇಶ ಆಸಂಗಿ ಗಂಗಪ್ಪ ಮಾದರ ಉಪಸ್ಥಿತರಿದ್ದರು.

loading...