ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಧ ಸಾವು

0
7
loading...

ಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದ ಮೌಲಾಲಿ ಪಾಟೀಲ್(40)ಮೃತಪಟ್ಟ ಯೋಧ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧನನ್ನು ಚಿಕಿತ್ಸೆಗಾಗಿ ಪುಣೆ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಇಂದು ಸ್ವಗ್ರಾಮ ಕಸಮಳಗಿಗೆ ಯೋಧನ ಪಾರ್ಥಿವ ಶರೀರ ತಲುಪಿದ್ದು,ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.ಮೃತ ಯೋಧನಿಗೆ ಪತ್ನಿ, ಪುತ್ರ, ತಂದೆ, ತಾಯಿ ಮತ್ತು ಮೂವರು ಸೋದರರು ಇದ್ದಾರೆ.

loading...