ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ: ಪ್ರಭು

0
7
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಅನೇಕರ ತ್ಯಾಗಬಲಿದಾನದ ಫಲದಿಂದ ಭಾರತಿಯ ಜನತಾ ಪಾರ್ಟಿ ಈ ಉನ್ನತ ಸ್ಥಾನಕ್ಕೆ ಬಂದು ನಿಂತಿದೆ. ಕೇವಲ ಎರಡು ಸಂಸದರು, ಶಾಸಕರನ್ನು ಆಯ್ಕೆ ಮಾಡಿದ ಈ ಪಕ್ಷ ಇಂದು ದೇಶದ ಚುಕ್ಕಾಣಿ ಹಿಡಿದು ವಿಶ್ವಗುರು ಸ್ಥಾನಕ್ಕೇರಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ವಿನೋದ ಪ್ರಭು ಹೇಳಿದರು.
ತಾಲೂಕಿನ ಹಳದೀಪುರ ಗೋಪಿನಾಥ ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಶಾಸಕ ದಿನಕರ ಶೆಟ್ಟಿಯವರ ಅಭಿನಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಕುಮಟಾ -ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಋಣ ನನ್ನ ಮೇಲಿದೆ. ಕ್ಷೇತ್ರದಲ್ಲಿನ ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ವಂಚಿತರಾಗಬಾರದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹೆಮ್ಮೆಯ ಸಚಿವರಾದ ಅನಂತಕುಮಾರ ಹೆಗಡೆ ಅವರನ್ನು ಪುನಃ ಆಯ್ಕೆಮಾಡಿ ಕಳುಹಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮತೋಮ್ಮೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರನ್ನ ನೋಡುವ ಸೌಭಾಗ್ಯ ನಮ್ಮದಾಗಲಿ ಎಂದರು.
ಈ ಸಂದರ್ಭದಲ್ಲಿ ಉಜ್ವಲ ಯೋಜನೆಯಡಿ 81 ಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಿಸಲಾಯಿತು. ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ. ಜಿ.ಜಿ.ಹೆಗಡೆ, ಎಮ್ .ಜಿ.ಭಟ್ಟ, ಉಮೇಶ ನಾಯ್ಕ, ಎಮ್.ಜಿ.ನಾಯ್ಕ, ಗಣೇಶ ಗೋವರ್ಧನ್ ಪೈ, ಪರಮೇಶ್ವರ ನಾಯ್ಕ, ಲೋಕೇಶ ಮೇಸ್ತ, ಸುಬ್ರಹ್ಮಣ್ಯ ಶಾಸ್ತ್ರಿ, ಯುವಮೋರ್ಚಾ ಅಧ್ಯಕ್ಷ ದೀಪಕ್ ಶೇಟ್ ಇತರರು ಉಪಸ್ಥಿತರಿದ್ದರು.

loading...