ಅಪಹರಣಕಾರರನ್ನು ಬೇಧಿಸಿದ ಪೊಲೀಸರು

0
7
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ವಿದ್ಯಾರ್ಥಿಯನ್ನು ಅಪಹರಣ ಮಾಡಿದ ಬಹುದೊಡ್ಡ ಕಿಡ್ನಾಪ್ ಪ್ರಕರಣ ಬೇಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಯೊಬ್ಬನನ್ನು ಅಪಹರಣ ಮಾಡಿದ್ದ 12 ಜನರ ತಂಡವನ್ನು ಬಂಧಿಸಲಾಗಿದೆ. ವಿದ್ಯಾನಗರದ ಉದ್ಯಮಿ ಹಾಗೂ ಗುತ್ತಿಗೆದಾರ ನಜೀರ ಅಹ್ಮದ್ ಅತ್ತಾರ ಎಂಬುವರ ಪುತ್ರ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಈತ ಸೇಂಟ್ ಆಂಟೋನಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಎರಡು ದಿನಗಳ ಹಿಂದೆ ವಿದ್ಯಾರ್ಥಿಯನ್ನು ಅಪಹರಿಸಿ, ಪೋಷಕರ ಬಳಿ ಒಂದು ಕೋಟಿಗೆ ಬೇಡಿಕೆ ಇಟ್ಟು ಆಟೋದಲ್ಲೇ ಗ್ರಾಮೀಣ ಪ್ರದೇಶಗಳಲ್ಲಿ ಅಪಹರಣಕಾರರು ಸುತ್ತಾಡಿದ್ದರು. ನಜೀರ ಅಹ್ಮದ್ 40 ಲಕ್ಷ ರೂಪಾಯಿ ಕೊಟ್ಟು 60 ಲಕ್ಷಕ್ಕೆ ಸಮಯ ಪಡೆದಿದ್ದರು. ಉದ್ಯಮಿ ನಜೀರ್ ಅಹ್ಮದ್‍ಗೆ ಒಬ್ಬನೇ ಗಂಡು ಮಗ ಇದ್ದಿದ್ದನ್ನೇ ಬಂಡವಾಳವಾಗಿಸಿಕೊಳ್ಳಲು ಅವರ ಮಗನನ್ನು ಕಿಡ್ನಾಪ್ ಮಾಡಿದ್ದರು. ಹುಬ್ಬಳ್ಳಿ-ಧಾರವಾಡ ಕ್ರೈಂ ಇತಿಹಾಸದಲ್ಲೇ ಇದು ಬಹುದೊಡ್ಡ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣವಾಗಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

loading...