ಅಪ್ಪಣ್ಣನವರು ಎರಡನೇ ಬಸವಣ್ಣನಂದೆ ಖ್ಯಾತಿ ಪಡೆವರು: ಶ್ರೀಗಳು

0
9
loading...

 

ಬಸವನಬಾಗೇವಾಡಿ: ಆಯಾ ಸಮಾಜಗಳ ಒಳತಿಗಾಗಿ ಶ್ರಮಿಸಿದ ಶರಣರಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಒಬ್ಬರು, ಅಪ್ಪಣ್ಣನವರು ಜಗತ್ತಿಗೆ ಒಳಿತಿಗಾಗಿ ಶ್ರಮಿಸಿದ ಬಸವಣ್ಣನವರ ಅಪ್ತಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅಪ್ಪಣ್ಣನವರು ಎರಡನೇ ಬಸವಣ್ಣನಂದೆ ಪ್ರಖ್ಯಾತಿ ಪಡೆದಿದ್ದರು ಎಂದು ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನಮಠದ ಬಸವಪ್ರೀಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ಥಳೀಯ ನಂದಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಹಡಪದ ಸಮಾಜದ ಸಮುದಾಯ ಭವನದ ಉದ್ಘಾಟನೆ ಹಾಗೂ ಗುರುಭವನದ ಅಡಿಗಲ್ಲು ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಮಾಜದ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು ಇದು ಸಮಾಜದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು, ಧರ್ಮಕಾರ್ಯಕ್ಕಾಗಿ, ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಭವನ ಉಪಯೋಗಿಸಲು ಸಮಾಜದ ಭಾಂದವರು ಮುಂದಾಗಬೇಕೆಂದು ಹೇಳಿದರು.
ಹಡಪದ ಸಮಾಜದ ಯುವಕರು ದುಶ್ಚಟಗಳಿಂದ ದೂರವಿದ್ದು ಗುರುಹಿರಿಯರನ್ನು ಗೌರವಿಸುವದರೊಂದಿಗೆ ಸಮಾಜದ ಒಳತಿಗಾಗಿ ಶ್ರಮವಹಿಸಬೇಕು, ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಬಸವಾದಿ ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದು ಹೇಳಿದರು.
ವಿಜಯಪುರದ ಜ್ಞಾನ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ದೇಶದಲ್ಲಿ ವಿವಿಧ ಕರಕುಶಲ ಸೇರಿದಂತೆ ವಿವಿಧ ಉದ್ಯೋಗಗಳು ನಡೆಯುತ್ತಿದ್ದು, ಹಡಪದ ಸಮಾಜದವರು ಕ್ಷೌರಿಕ ವೃತ್ತಿಯನ್ನು ಮೂಲವೃತ್ತಿಯನ್ನಾಗಿಸಿಕೊಂಡು ಸುಮ್ನೆ ಕೂಡದೇ ತಮ್ಮ ಮಕ್ಕಳನ್ನು ಡಾಕ್ಟರ, ಇಂಜನೀಯರ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸಲು ಪಾಲಕರು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಸಮಾರಂಭದಲ್ಲಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಗೊರನಾಳದ ವಿರೋಪಾಕ್ಷಯ್ಯ ದೇವರು ಮಾತನಾಡಿದರು, ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮೀಜಿ, ಅಮೃತಾನಂದ ಸ್ವಾಮೀಜಿ, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಶರಣಗೌಡ ಪಾಟೀಲ, ಭೂದಾನಿ ಗಂಗಾಧರ ಕುಂಟೋಜಿ, ವಿರೇಶ ಕುಂಟೋಜಿ, ಜಗದೀಶ ಕೊಟ್ರಶೆಟ್ಟಿ ಸೇರಿದಂತೆ ಇತರರು ಇದ್ದರು.
ಸಮೀತಿಯ ಪ್ರಧಾನ ಕಾರ್ಯದರ್ಶಿ ಗುರುಲಿಂಗ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು, ನ್ಯಾಯವಾದಿ ಚನ್ನು ಹಡಪದ ಸ್ವಾಗತಿಸಿದರು. ವಿಶ್ವಬಂಧು ಬಸವ ಸಮೀತಿಯ ಪ್ರಧಾನ ಕಾರ್ಯದರ್ಶಿ ಡಾ. ಅಮರೇಶ ಮಿಣಜಗಿ ನಿರೂಪಿಸಿದರು, ಪರ್ತಕರ್ತ ನಾಗೇಶ ನಾಗೂರ ವಂದಿಸಿದರು.

loading...