ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ:ಉ.ಕ.ಹೋರಾಟ ಸಮಿತಿ ಎಚ್ಚರಿಕೆ

0
12
loading...

ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ:ಉ.ಕ.ಹೋರಾಟ ಸಮಿತಿ ಎಚ್ಚರಿಕೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ೧೩ ಜಿಲ್ಲೆಗಳನ್ನು ಅಭಿವೃದ್ಧಿ ಹಿತದೃಷ್ಟಿಯಿಂದ ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳು ಕಡೆಗಣಿಸಿವೆ ಹಾಗಾಗಿ ಈ ಭಾಗದಲ್ಲಿ ಅಸಮತೋಲನ ತಲೆದೋರಿದೆ .ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೆ ಈ ತಾರತಮ್ಯ ನಿವಾರಣೆಗೆ ಮುಂದಾಗಬೇಕೆಂದು ಆಗ್ರಹ ಪಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .

ಗುರುವಾರ ಉ.ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಬೆಂಬಲಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಉ.ಕ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಭೀಮಪ್ಪಾ ಗಡಾದ ಅಭಿವೃದ್ಧಿಗೆ ರಾಜ್ಯ ಸರಕಾರ ಮುಂದಾಗಬೇಕು ನಂಜುಂಡಪ್ಪ ವರದಿ ಜಾರಿ ಮಾಡಬೇಕು.ನಮ್ಮ ಹೋರಾಟ ಉ ಕ ಅಭಿವೃದ್ಧಿಗಾಗಿ ಹೊರತು ರಾಜ್ಯ ಒಡೆಯಲು ಅಲ್ಲವೇ ಅಲ್ಲ.ಉ.ಕ ಕಡೆ ಗಣನೆಯಾದರೆ ಪ್ರತ್ಯೇಕತೆ ಅನಿರ್ವಾಯ ಎಂದು ಸರಕಾರಕ್ಕೆ ಎಚ್ಚರಿಸಿದರು .
ಪ್ರತಿಭಟನೆಯಲ್ಲಿ ಉ ಕ ಹೋರಾಟ ಸಮಿತಿ ಜಿಲ್ಲಾದ್ಯಕ್ಷ ಅಡಿವೇಶ ಇಟಗಿ ಸೇರಿದಂತೆ ಇತರು ಇದ್ದರು .

loading...