ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸಹಕಾರ ಅಗತ್ಯ: ಸಚಿವ ದೇಶಪಾಂಡೆ

0
7
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯವರ ಸಹಕಾರವೂ ಬೇಕು. ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಎಲ್ಲರ ಸಹಮತಬೇಕು ರಾಜ್ಯ ಕಂದಾಯ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನೂ ಅಭಿವೃದ್ಧಿಯಾಗಬೇಕಿದೆ ಎಂಬುದು ನನಗೆ ಗೊತ್ತಿದೆ ಎಂದು ನುಡಿದರು. ಪ್ರತ್ಯೇಕ ರಾಜ್ಯವನ್ನು ಕೇಳುವವರು ಯಾರು ಎಂದು ಪ್ರಶ್ನಿಸಿದ ಅವರು, ಇದು ಅಖಂಡ ಕರ್ನಾಟಕವಲ್ಲ, ಪ್ರಗತಿಪರ ಕರ್ನಾಟಕ ಎಂದು ಹೇಳಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 115 ಕೋಟಿ ರೂ. ಬಾಕಿ ಹಣ ಸರಕಾರದಿಂದ ಬರಬೇಕೆನ್ನಲಾಗುತ್ತಿದ್ದು, ಇದಿನ್ನೂ ತಮ್ಮ ಗಮನಕ್ಕೆ ಬಂದಿಲ್ಲ. ಬಂದ ನಂತರ ಪರಿಶೀಲಿಸುವುದಾಗಿ ಅವರು ಹೇಳಿದರು. ಕುಡಿಯುವ ನೀರಿಗಾಗಿ ಇಲ್ಲಿಗೆ 24 ಕೋಟಿ ರೂ. ಹಣ ಬಿಡುಗಡೆ ಮಾಡಬೇಕಿದ್ದು, ಅದನ್ನು ತಕ್ಷಣವೇ ಬಿಡುಗಡೆ ಮಾಡಿಸುತ್ತೇನೆ ಎಂದು ಸಚಿವರು ಹೇಳಿದರು.
ಧಾರವಾಡ ಒಳ್ಳೆಯ ಜಿಲ್ಲೆ ಇಲ್ಲಿ ಸಾಕಷ್ಟು ಪ್ರಗತಿಪರ ಜನರಿದ್ದಾರೆ ಈ ಜಿಲ್ಲೆ ಇನ್ನು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ ಹಳ್ಳೂರ, ಶಾಸಕ ಪ್ರಸಾದ ಅಬ್ಬಯ್ಯ, ಬಂಗಾರೇಶ ಹಿರೇಮಠ, ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿಮಠ, ಅಬ್ದುಲ್ ಸಾವಂತನವರ, ಬಸವರಾಜ ಗೊಬ್ಬಿ, ಪ್ರಕಾಶ ನಾಯಕ, ಜಿ. ದೇವಕಿ, ಸುನೀತಾ ಹುಕಡ್ಲಿ, ರಾಜು ಲದ್ವಾ, ಬಸವರಾಜ ಮೆಣಸಗಿ, ಮಣಿಕಂಠ ಬಾಲರೆಡ್ಡಿ, ಆನಂದ ಕಮ್ಮಾರ ಉಪಸ್ಥಿತರಿದ್ದರು.

loading...