ಅಭಿವೃದ್ಧಿ ನೆಪವೊಡ್ಡಿ ರಾಜ್ಯ ಒಡೆಯುವ ಕಾರ್ಯ ಸಹಿಸಲ್ಲ :ಭೀಮಾಶಂಕರ ಪಾಟೀಲ

0
110
loading...

ಅಭಿವೃದ್ಧಿ ನೆಪವೊಡ್ಡಿ ರಾಜ್ಯ ಒಡೆಯುವ ಕಾರ್ಯ ಸಹಿಸಲ್ಲ :ಭೀಮಾಶಂಕರ ಪಾಟೀಲ

ಕನ್ನಡಮ್ಮ ಸುದ್ದಿ-ಬೆಳಗಾವಿ:ಪ್ರತ್ಯೇಕತೆ ಬಗ್ಗೆ ಮಾತನಾಡುವ ರಾಜಕಾರಣಿಗಳು ತಾವು ಶಾಸಕ ಸಚಿರಾಗಿದ್ದಾಗ ಉತ್ತರ ಕರ್ನಾಟಕಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಬಹಿರಂಗ ಪಡೆಸಲಿ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜಾದ್ಯಕ್ಷ ಭೀಮಾಶಂಕರ ಪಾಟೀಲ ಪ್ರತ್ಯೇಕ ರಾಜ್ಯದ ಪರ ಮಾತನಾಡುವ ಹೋರಾಟಗಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜಕಾರಣಿಗಳು ತಮ್ಮ ಸ್ಥಾರ್ಥಕ್ಕಾಗಿ ಕನ್ನಡಿಗರಿಂದ ಆಯ್ಕೆಯಾಗಿ ರಾಜ್ಯ ಒಡೆಯುವ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ನಗರದ ಪಿರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ವಿರೋಧಿಸುವದು ಸರಿಯಲ್ಲ .ರಾಯಣ್ಣ ಕನ್ನಡಿಗರ ಹೆಮ್ಮೆಯ ವೀರ ಯೋಧನ ಪ್ರತಿಮೆ ಸ್ಥಾಪಿಸಬೇಕು .ಇಲ್ಲವಾದರೆ ನಾವು ಕೂಡ ಶಿವಾಜಿ ಪ್ರತಿಮೆಗೆ ವಿರೋಧ ಮಾಡಬೇಕಾಗುತ್ತದೆ ಎಂದು ಹೇಳಿದರು .

ಪತ್ರಿಕಾಗೊಷ್ಠಿಯಲ್ಲಿ ಬೆಳಗಾವಿ ಜಿಲಾದ್ಯಕ್ಷ ಬಾಬು ಸಂಗೋಡಿ,ಹುಕ್ಕೇರಿ ತಾಲೂಕು ಅದ್ಯಕ್ಷ ಸುನೀಲ ಪಾಟೀಲ ಸೇರಿದಂತೆ ಇತರರು ಇದ್ದರು.

loading...