ಅ.ನ.ಕೃ ರಾಜ್ಯ ಪ್ರಶಸ್ತಿಗೆ ಪಾಟೀಲ ಪುಟ್ಟಪ್ಪ ಆಯ್ಕೆ

0
4
loading...

ಕನ್ನಡಮ್ಮ ಸುದ್ದಿ-ಧಾರವಾಡ: ಬೆಂಗಳೂರಿನ ಅ.ನ.ಕೃ ಪ್ರತಿಷ್ಠಾನವತಿಯಿಂದ ಪ್ರಪ್ರಥಮ ಬಾರಿ ಕೂಡಮಾಡುತ್ತಿರುವ ಅ.ನ.ಕೃ ರಾಜ್ಯ ಪ್ರಶಸ್ತಿಗೆ ಸಾಹಿತಿ,ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆಮಾಡಲಾಗಿದೆ ಎಂದು ಪ್ರತಿಷ್ಠಾನದ ಟ್ರಸ್ಟಿಗಳು,ಸಾಹಿತಿ ಶಾ.ಮಂ.ಕೃಷ್ಣರಾಯ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರಶಸ್ತಿಯು ಸುಮಾರು 50 ಸಾವಿರ ನಗದು ಹಣವನ್ನು ಹಾಗೂ ನಾಮಫಲಕವನ್ನು ಒಳಗೊಂಡಿದ್ದು ಆ. 12 ರಂದು ಸಂಜೆ 4.30 ಗಂಟೆಗೆ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತಿದೆ.
ಪತ್ರಕರ್ತರಾಗಿ, ಲೇಖಕರಾಗಿ, ಕನ್ನಡ ಕಾವಲು ಸಮಿತಿಯ ಮಾಜಿ ಅಧ್ಯಕ್ಷರಾಗಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಮಾಡಿರುವ ಕನ್ನಡ ನಾಡಿನ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕಮಾಡಲಾಗಿದೆ. ಈ ಪ್ರತಿಷ್ಠಾನವನ್ನು ಜುಲೈ 1971 ರಲ್ಲಿ ಕೊನೆಯುಸಿರು ಎಳೆದ ಕನ್ನಡದ ಖ್ಯಾತ ಸಾಹಿತಿ, ವಾಗ್ಮಿ, ಚಳುವಳಿಗಾರ ಅ.ನ.ಕೃಷ್ಣರಾಯರ ಸ್ಮರಣಾರ್ಥ ಪ್ರಾರಂಭಿಸಲಾಯಿತು, ಇದುವರೆಗೂ ವರ್ಷಕ್ಕೊಮ್ಮೆ ಕನ್ನಡ ನಾಡು-ನುಡಿಗೆ ಸೇವೆ ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿತ್ತು, ಆನಂತರ ಕೆ.ಟಿ.ಚಂದ್ರಶೇಖರ ಅವರನ್ನು ವಿ.ಲಕ್ಷ್ಮೀನಾರಾಯಣ ನಿರ್ಮಾಣ ಶೆಲ್ಟರ್ಸ್ ಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರನ್ನು ಪ್ರತಿಷ್ಠಾನದಲ್ಲಿ ಸೇರಿಸಿಕೊಂಡ ನಂತರ ಪ್ರಶಸ್ತಿಯ ರೂಪ ಬದಲಾಯಿತು ಈ ಬಾರಿ ಪ್ರತಿಷ್ಠಾನ ಸ್ವಶಕ್ತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪ್ರಮೋದ ಗಾಯಿ ಆಗಮಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದು ಸಾಹಿತಿ ಡಾ.ಶಾಂತಿನಾಥ್ ದಿಬ್ಬದ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಅ.ನ.ಕೃಷ್ಣರಾಯ ಕುರಿತು ಬೆಂಗಳೂರಿನ ಸಾಹಿತಿ,ವಾಗ್ಮಿಗಳುಆದ ಪ್ರೋ.ಜಿ.ಅಶ್ವತ್ಥನಾರಾಯಣ ಮಾತನಾಡಲಿದ್ದಾರೆ. ನಂತರ ಗಾಯಕ ಬಸಲಿಂಗಯ್ಯ ಹಿರೇಮಠ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಬಸವಲಿಂಗಯ್ಯ ಹಿರೇಮಠ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.

loading...