ಅ. ೧೧ ರಿಂದ ೧೪ ರವರೆಗೆ “ರಣ ನೀತಿ-೩” ಜಿತೋ ಕ್ರಿÃಡಾ ಸ್ಪರ್ಧೆ

0
6
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಅರ್ಗನೈóಝೇಷನ ಜಿತೋ ಯುವ ಘಟಕದಿಂದ “ರಣ ನೀತಿ-೩” ಮೂರನೇಯ ಆವೃತ್ತಿಯಡಿ ಇದೇ ಅಗಸ್ಟ ೧೧ ರಿಂದ ೧೪ ರವರೆಗೆ ಕ್ರಿÃಡಾ ಸ್ಫರ್ಧಾ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿತೋ ಯುವ ಘಟಕ ಅಧ್ಯಕ್ಷ ಅಮಿತ ದೋಷಿ ಅವರು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೧೨೦ ಕ್ರಿÃಡಾಪಟುಗಳು ಈಗಾಗಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಈ ಕ್ರಿÃಡಾಪಟುಗಳನ್ನು ೮ ವಿವಿಧ ಫ್ರೆಚೈಂಸಿ ಪೆಡೆದ ತಂಡಗಳ ಮೂಲಕ ಹರಾಜು ಮಾಡಿ ಅವರನ್ನು ಆಯಾ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಎಲ್ಲ ತಂಡಗಳಲ್ಲಿ ಒಂದು ಸೌಹಾರ್ದಯುತ ಸ್ಪರ್ಧೆಯ ವಾತಾವರಣ ನಿರ್ಮಿಸಿ ವಿವಿಧ ಕ್ರಿಡೆಗಳ ಸ್ಫರ್ಧೆಗಳನ್ನು ನಡೆಸಲಾಗುತ್ತದೆ ಎಂದರು.
ಈ ಸ್ಪರ್ಧೆಯಲ್ಲಿ ಅಥ್ಲೆಟಿಕ್ಸ್, ಬ್ಯಾಡಮಿಂಟನ್, ಟೆಬಲ್ ಟೆನಿಸ್, ಚೆಸ್, ಕ್ಯಾರಮ್ , ಸ್ನೂಕರ, ಕ್ರಿÃಕೆಟ್ ಮತ್ತು ಫುಟಬಾಲ ಕ್ರಿÃಡೆಗಳ ಸ್ಪರ್ಧೆಗಳು ನಡೆಯಲಿದ್ದು, ಕೆಲ ಸ್ಪರ್ಧೆಗಳು ಕೆ.ಎಲ್.ಇ. ಸ್ಪೊÃರ್ಟ್ಸ ಕಾಂಪ್ಲೆÃಕ್ಸ್ದಲ್ಲಿ ನಡೆಯಲಿವೆ. ಕ್ರಿಕೆಟ ಮತ್ತು ಫುಟಬಾಲ ಪಂದ್ಯಾವಳಿಗಳು ಮಂಡೊಳಿ ಗ್ರಾಮದ ಹತ್ತಿರವಿರುವ ಮೈದಾನದಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು.
ಅದಲ್ಲದೇ ಅ. ೧೫ ರಂದು ಬೆಳಗಾವಿ ನಗರದ ಶಗುನ ಗಾರ್ಡನದಲ್ಲಿ ದೇಶಭಕ್ತಿಗಳ ಗೀತೆಗಳ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಸಂಗಿತಕಾರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ” ರಣನೀತಿ.೩” ಕಾರ್ಯಕ್ರಮದ ಸಹ ಸಂಯೋಜಕರಾದ ಅಮೋಗ ನಿಲಜಗಿ, ರುಚಿತಾ ಕಟಾರಿಯಾ, ಮೇಘರಾಜ ರಾಮಗೊಂಡಾ, ಅಕ್ಷಯ ಭೋಜನ್ನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...