ಅ. 15ರಿಂದ ಕೆಪಿಎಲ್ ಕಲರವ: ರಾಜ್ಯದ ಮೂರು ಕಡೆ ಪಂದ್ಯಗಳ ಆಯೋಜನೆ

0
5
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಕಾರ್ಬನ್ ಸ್ಮಾರ್ಟಫೋನ್ ಆಯೋಜಿತ ಕೆಪಿಎಲ್ 7ನೇ ಆವೃತ್ತಿಯು ಇದೇ ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ.
ನಗರದಲ್ಲಿಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೆಪಿಎಲ್ ಹುಬ್ಬಳ್ಳಿ ವಿಭಾಗದ ಸಹ ಕಾರ್ಯದರ್ಶಿ ಸಂತೋಷ್ ಮೆನನ್ ಅವರು, ಕೆಪಿಎಲ್‍ನ ಬ್ರಾಂಡ್ ಅಂಬಾಸಿಡರ್, ಚಿತ್ರನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಸತತವಾಗಿ ಕೆಪಿಎಲ್ 6 ಆವೃತ್ತಿಗಳು ಉತ್ತಮ ರೀತಿಯಲ್ಲಿ ಅಂತಿಮಗೊಂಡಿದ್ದು, ಏಳನೇ ಆವೃತ್ತಿಯೂ ಕೂಡ ಸುಸಜ್ಜಿತ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಅಲ್ಲದೇ ಆಗಸ್ಟ್ 15 ರಂದು ಪ್ರಾರಂಭವಾಗುವ ಕೆಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ನಂತರದಲ್ಲಿ ಮೈಸೂರು ಹಾಗೂ ಹುಬ್ಬಳ್ಳಿಗೆ ವರ್ಗಾವಣೆಯಾಗಲಿವೆ ಎಂದು ಮಾಹಿತಿ ನಿಡಿದರು. ಕೆಪಿಎಲ್ ನಲ್ಲಿ ಶಿವಮೊಗ್ಗ, ಮೈಸೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಕ್ರಿಕೆಟ್ ಟೀಮಗಳು ಪಾಲ್ಗೊಳ್ಳಲಿವೆ. ಅಲ್ಲದೇ ಸೈಕಲ್ ಪ್ಯೂರ್ ಅಗರಬತ್ತಿ, ವಿಜಯಕರ್ನಾಟಕ, ವಿಮಲ್ ಪಾನಮಸಾಲ, ಹಾಟ್‍ಸ್ಟಾರ್, ಪಾಸ್ಟ್ ಟ್ರ್ಯಾಕ್ ಕಂಪನಿಗಳ ಸಹಯೋಗದಲ್ಲಿ ಜರುಗಲಿದೆ.
ಸ್ಥಳೀಯ ಟೊರ್ನಾಮೆಂಟ್ ಆಗಿ ಪ್ರಾರಂಭವಾಗಿದ್ದ ಕೆಪಿಎಲ್ ಈಗ ಸಾಮಾಜಿಕ ಜಾಲತಾಣಗಳ ಮೂಲಕ 3.15 ಮಿಲಿಯನ್ ಜನರನ್ನು, ಫೇಸ್ ಬುಕ್ ಮೂಲಕ 1,57,02,582 ಪಾಲೋವರ್ಸನ್ನು ಹೊಂದಿರುವುದು ಕೆಪಿಎಲ್ ಸಾಧನೆ ಎಂದು ಹೇಳಬಹುದು. ಅಲ್ಲದೇ ಕನಿಷ್ಠ 16 ವರ್ಷದ ಆಟಗಾರರು ಕ್ರಿಕೆಟ್ ಲ್ಲಿ ಆಡಲಿದ್ದಾರೆ ಎಂದರು. ಬಳಿಕ ಮಾತನಾಡಿದ ಕೆಪಿಎಲ್ ಬ್ರಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ, ಕ್ರಿಕೆಟ್ ಎಂಬುದು ಎಲ್ಲರನ್ನೂ ಆಕರ್ಷಿಸುವ ಕ್ರೀಡೆಯಾಗಿದೆ. ಅಲ್ಲದೇ ಸಿಸಿಎಲ್, ಐಪಿಎಲ್, ಕೆಪಿಎಲ್ ಕೂಡ ಒಂದು ಉತ್ತಮ ಮಟ್ಟದ ಕ್ರೀಡಾ ವೇದಿಕೆಯಾಗಿದೆ. ಕೆಪಿಎಲ್ ಅಂಬಾಸಿಡರ್ ಆಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಕೆಪಿಎಲ್ ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಟಗಾರರು ಆಡಲಿದ್ದಾರೆ ಎಂದರು.
ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ವಿನಯ್ ಮಾತಾಡಿ, ಕೆಪಿಎಲ್ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿದೆ. ಈ ಬಾರಿಯ ತಂಡದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಟೈಗರ್ಸ ತಯಾರಿ ನಡೆಸಿದೆ. ಅಲ್ಲದೇ ಉತ್ತಮ ಆಟ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

loading...