ಅ.27ರಿಂದ ಆರಾಧನಾ ಮಹೋತ್ಸವ ಕಾರ್ಯಕ್ರಮ

0
24
loading...

ಮುಂಡರಗಿ: ಸ್ಥಳೀಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾಮಠದಲ್ಲಿ ಅ.27ರಿಂದ 29 ರವರೆಗೆ ರಾಘವೇಂದ್ರ ಸ್ವಾಮೀಜಿಗಳ 347ನೇ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾಮಠದ ಗೌರವ ವಿಚಾರಣಾಕರ್ತ ನಾರಾಯಣಪ್ಪ ಇಲ್ಲೂರ ತಿಳಿಸಿದರು.
ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಶ್ರೀಮಠದಲ್ಲಿ ಅ.25ರಂದು ಬೆಳಗ್ಗೆ 9ಗಂಟೆಗೆ ಋಗ್ವೇಧ ನೂತನ ಉಪಾಕರ್ಮ ನಡೆಯಲಿದೆ. ಅ.26ರಂದು ಬೆಳಗ್ಗೆ ಯಜುರ್ವೇಸಿಗಳ ಉಪಾಕರ್ಮ ಹಾಗೂ ಬೆಳಗ್ಗೆ 10ಗಂಟೆಗೆ ಸತ್ಯನಾರಾಯಣಪೂಜೆ ಸಂಜೆ 5 ಗಂಟೆಗೆ ಶಾಕೋತ್ಸವ, ಲಕ್ಷ್ಮೀ ಪೂಜೆ, ಗೋಪೂಜೆ, ಧಾನ್ಯಪೂಜೆ, ಧ್ವಜಾರೋಹಣ ಹಾಗೂ ಮಹಾಮಂಗಳಾರತಿ ನೆರವೇರಲಿದೆ ಎಂದರು.ಅ.27ರಂದು ಪೂರ್ವಾರಾಧನೆ, ಆ.28ರಂದು ಮಧ್ಯಾರಾಧನೆ ನಡೆಯುತ್ತದೆ. ಆ.29ರಂದು ಉತ್ತರಾಧನೆಯಂದು ಬೆಳಗ್ಗೆ 530ಗಂಟೆಗೆ ಸುಪ್ರಭಾತ, ನಿರ್ಮಾಲ್ಯ, 7.30ಕ್ಕೆ ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, 8.30 ರಿಂದ 10.30ರವರೆಗೆ ಪಾದಪೂಜೆ, ಕನಕಾಭಿಷೇಕ, ಮಹಾಪೂಜೆ, ಸರ್ವಸೇವಾ. ಮಧ್ಯಾಹ್ನ 12.30ಕ್ಕೆ ಅಲಂಕಾರ ಸೇವೆ, ಮಹಾ ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹೇಳಿದರು. ಅ.29ರಂದು ಉತ್ತರಾಧನೆ ಪ್ರಯುಕ್ತ ಬೆಳಗ್ಗೆ 10ಗಂಟೆಗೆ ಪಟ್ಟಣದ ರಾಜಬೀದಿಗಳಲ್ಲಿ ವೇದಘೋಷದೊಡನೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದರು. ಶ್ರೀರಾಘವೇಂದ್ರಸ್ವಾಮಿಗಳ ಶಾಖಾಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ, ಕಾಂತರಾಜ ಹಿರೇಮಠ, ಬಿ.ವಿ.ಮುದ್ದಿ, ದಿಲೀಪಕುಮಾರ ಜೋಶಿ, ಮತ್ತಿತರರಿದ್ದರು.

loading...