ಆಗಸ್ಟ್ 29ಕ್ಕೆ ದಸರಾ ಗಜಪಯಣ ನಿಗದಿ

0
6
loading...

ಬೆಂಗಳೂರು:ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಕೊಡಗು ಜಿಲ್ಲೆಯ ನೆರೆ ಹಾವಳಿಯಿಂದ ಮುಂದೂಡಿಕೆಯಾಗಿದ್ದ ಗಜಪಯಣ ಇದೀಗ ಆಗಸ್ಟ್ 29ಕ್ಕೆ ನಿಗದಿಯಾಗಿದೆ.
12ಆನೆಗಳ ಪೈಕಿ 6 ಆನೆಗಳ ತಂಡ ಮೈಸೂರಿಗೆ ಆಗಸ್ಟ್ 29ರಂದು ಮೈಸೂರಿಗೆ ಹೆಜ್ಜೆ ಹಾಕಲಿವೆ. ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಬಳಿಯ ನಾಗಾಪುರ ಬಳಿ ಜಿಲ್ಲಾಡಳಿತದಿಂದ ಗಜ ಪಡೆಗೆ ಸ್ವಾಗತ ಸಮಾರಂಭವಿದ್ದು, ಅಂದು ಅರ್ಜುನ ನೇತೃತ್ವದ ಗಜ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಣ್ಣು ಬೆಲ್ಲ ನೀಡಿ ಸ್ವಾಗತ ಕೋರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 28ಕ್ಕೆ ಸಿಎಂ ನೇತೃತ್ವದಲ್ಲಿ ದಸರಾ ಉನ್ನತ ಕಮಿಟಿ ಸಭೆ ನಡೆಯಲಿದೆ.
ಈ ಹಿಂದೆ ಆಗಸ್ಟ್ 23 ಕ್ಕೆ ಗಜಪಯಣ ನಿಗದಿಯಾಗಿತ್ತು.ಆದರೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ
ಆ. 23ರಂದು ನಿಗದಿಯಾಗಿದ್ದ ಗಜಪಯಣವನ್ನು ಮುಂದೂಡಲಾಗಿತ್ತು.

loading...