ಆಧಾರ್ ಕುರಿತಂತೆ ಪ್ರಾಧಿಕಾರ ನೀಡಿದೆ ಈ ಮಹತ್ವದ ಸೂಚನೆ

0
9
loading...

ಭಾರತೀಯ ದೂರ ಸಂಪರ್ಕ ನಿರ್ವಹಣಾ ಪ್ರಾಧಿಕಾರದ ಚೇರ್ ಮನ್ ಆರ್.ಎಸ್. ಶರ್ಮಾ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮುಖಭಂಗ ಅನುಭವಿಸಿದ್ದರು. ತಮ್ಮ ಆಧಾರ್ ನಂಬರ್ ನ್ನ ಟ್ವಿಟ್ಟರ್ನಲ್ಲಿ ಹಾಕಿ ಹ್ಯಾಕರ್ಸ್ ಗಳಿಗೆ ಸವಾಲು ಎಸೆದಿದ್ದರು.
ಇದಕ್ಕೆ ಫ್ರೆಂಚ್ ಭದ್ರತಾ ಸಿಬ್ಬಂದಿಯೊಬ್ಬ ಶರ್ಮಾಗೆ ಸಂಬಂಧಿಸಿದ ಕೆಲ ಮಾಹಿತಿಯನ್ನು ಅವರ ಮೊಬೈಲ್ ಸ್ಕ್ರೀನ್ ಸೇವರ್ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇದನ್ನ ಇಲ್ಲಿಗೆ ನಿಲ್ಲಿಸುತ್ತೇನೆ ಅಂತ ಹೇಳಿ ಆರ್.ಎಸ್. ಶರ್ಮಾಗೆ ಇರಿಸುಮುರಿಸು ಉಂಟುಮಾಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ, ಆಧಾರ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಅಂತ ಹೇಳಿದೆ. ಶರ್ಮಾ ಅವರ ಹೆಸರನ್ನು ಹೇಳದೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ, ಸಾಮಾಜಿಕ ಜಾಲತಾಣದಲ್ಲಿ ಆಧಾರ್ ನಂಬರ್ನೊಂದಿಗೆ ಚಾಲೆಂಜ್ ಮಾಡುತ್ತಿರುವಂತ ಘಟನೆಗಳು ನಡೆಯುತ್ತಿವೆ. ಇಂತಾ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಹೊಣೆ ಎಲ್ಲರ ಮೇಲೂ ಇದೆ ಎಂದಿದೆ.

loading...