ಆರೋಗ್ಯ ಇಲಾಖೆ ಪರಿಶೀಲನೆ ನಡೆಸಬೇಕೆಂದು ಆಗ್ರಹ

0
4
loading...

ಕನ್ನಡಮ್ಮ ಸುದ್ದಿ-ಕುಮಟಾ: ಗೋಕರ್ಣದಲ್ಲಿ ಅನಧೀಕೃತ ಹೊಟೇಲ್‌ಗಳ ಹಾವಳಿ ಹೆಚ್ಚಾಗಿದ್ದು, ಆಹಾರ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಹೀಗಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದಕ್ಕಾಗಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಬೇಕೆಂದು ಸದಸ್ಯ ಮಹೇಶ ಶೆಟ್ಟಿ ಆಗ್ರಹಿಸಿದರು.
ಅವರು ಶುಕ್ರವಾರ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ ಅವರು, ಹೊಟೇಲ್‌ಗಳ ಲೈಸೆನ್ಸ್ ನೀಡುವುದು, ನವೀಕರಿಸುವುದು ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಡಾ ಆಜ್ಞಾ ನಾಯಕ ಸಭೆಗೆ ತಿಳಿಸಿದರು. ಈ ಕುರಿತು ಸಭೆ ನಿರ್ಣಯ ಕೈಗೊಂಡು ಸಹಾಯಕ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಠರಾಯಿಸಲಾಯಿತು.
ಕಣ್ಣು ತಪ್ಪಿ ಉಳಿದ ಮಕ್ಕಳು ಮತ್ತು ತಾಯಂದಿರಿಗೆ ಇಂದ್ರಧನುಷ್ ಗ್ರಾಮ ಸ್ವರಾಜ್ ಯೋಜನೆ ಅಡಿಯಲ್ಲಿ ಚುಚ್ಚುಮದ್ದು ನೀಡಲಾಗುತ್ತಿದೆ. ಜುಲೈ ೧ ರಿಂದ ೭ರ ವರೆಗೆ ಸಂತಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ವಿವರವನ್ನು ನೀಡಿದರು.

ಗೋಕರ್ಣ ಆರೋಗ್ಯ ಘಟಕದಲ್ಲಿ ರವಿವಾರ ಸಿಬ್ಬಂದಿಗಳು ಯಾರೂ ಇಲ್ಲದಿರುವುದರಿಂದ ಅಗತ್ಯ ಪರಿಸ್ಥಿತಿಯಲ್ಲಿ ರೋಗಿಗಳು ತೊಂದರೆ ಅನುಭವಿಸಬೇಕಾಗಿದೆ ಎಂದು ಸದಸ್ಯ ರಾಜೇಶ ನಾಯಕ ದೂರಿದರು.
ನಾಡುಮಾಸ್ಕೆÃರಿ ಗ್ರಾ ಪಂ ಅಧ್ಯಕ್ಷ ಮೊಹಮ್ಮದ್ ಹನೀಫ್ ಮಾತನಾಡಿ, ಬಂಕಿಕೊಡ್ಲ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ಷೆÃಪಿಸಿದಲ್ಲದೇ ಈ ಸಮಸ್ಯೆಯನ್ನು ಸರಿಪಡಿಸುವಂತೆ ಹಲವು ಬಾರಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಅಳಕೋಡ ಗ್ರಾ ಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್ ಮಾತನಾಡಿ, ಅಳಕೋಡ ಪ್ರೌಢ ಶಾಲೆ ಶಿಷ್ಠಾಚಾರ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಕಾರ್ಯನಿರ್ವಹಣಾಧಿಕಾರಿ ಮಹೇಶ ಕುರಿಯವರ್ ಅವರು, ಬಿಇಒ ಅವರಿಗೆ ಸೂಚಿಸಿದರು.

ಪ್ರಭಾರೆ ಬಿಇಒ ಗಣೇಶ ನಾಯ್ಕ ಮಾತನಾಡಿ, ಸ್ಟುಡೆಂಟ್ ಟ್ರಾö್ಯಕಿಂಗ್ ಅಚೀವ್‌ಮೆಂಟ್ ಪ್ರಕಾರ ತಾಲೂಕಿನಲ್ಲಿ ಒಟ್ಟೂ ೨೦,೭೧೦ ಮಕ್ಕಳು ದಾಖಲಾತಿ ಹೊಂದಿದ್ದಾರೆ. ಇನ್ನೂ ಸಹ ಬೈಸಿಕಲ್, ಸಮವಸ್ತç ಪೂರೈಕೆ ಆಗಿಲ್ಲ. ಉರ್ದು ಭಾಷಾ ಪುಸ್ತಕಗಳು ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ತಾಪಂ ಉಪಾಧ್ಯಕ್ಷೆ ಗೀತಾ ಮುಕ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ನಾಯ್ಕ ಹಾಗೂ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

loading...