ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ದಿಢೀರ ಭೇಟಿ

0
12
loading...

ಇಂಡಿ: ತಾಲೂಕಿನ ಅಥರ್ಗಾ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ ಭೇಟಿ ನೀಡಿ ಅಲ್ಲಿ ಅವ್ಯಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಅಲ್ಲಿನ ವೈದ್ಯಾಧಿಕಾರಿಗಳಿಗೆ ಹಾಗೂ ನರ್ಸ ಅವರಿಗೆ ತರಾಟೆ ತಗೆದುಕೊಂಡ ಘಟನೆ ನಡೆದಿದೆ.
ಅಥರ್ಗಾ ಗ್ರಾಮದ ಖಾಸಗಿ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹಾಗೂ ಅಲ್ಲಿನ ಗ್ರಾಮಸ್ಥರ ದೂರು ಅನ್ವಯ ಈ ಸಚಿವರು ಭೇಟಿ ನೀಡಿ ಅಲ್ಲಿನ ಆಸ್ಪತ್ರೆಯಲ್ಲಿನ ಎಲ್ಲ ವಾರ್ಡುಗಳಿಗೆ ಭೇಟಿ ನೀಡಿ ಪರೀಶಲನೆ ನಡೆಸಿದರು. ಆದರೆ ಆ ಸಂದರ್ಭದಲ್ಲಿ ವಾರ್ಡುಗಳ ಸ್ವಸ್ಚತೆ ಕಾಣದೇ ಇರುವದನ್ನು ವೈದ್ಯಾಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು ಹಾಗೂ ಬಡ ರೋಗಿಗಳಿಗೆ ಹಣ ಕೇಳುತ್ತಿದ್ದಿರಿ ಹಾಗೂ ಹೆರಿಗೆಗೆ ಬರುವ ಮಹಿಳೆಯರಿಗೆ ನರ್ಸುಗಳು ಹಾಗೂ ವೈದ್ಯಾಧಿಕಾರಿಗಳು ಸಾವಿರಾರು ಹಣ ಪಡೆಯುತ್ತಿದ್ದಿರಿ ಇದರಿಂದ ಬೆಸತ್ತು ಮಹಿಳೆಯರು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು ಅದನ್ನು ಯಾರು ನನಗೆ ಗಮನಕ್ಕೆ ತಂದಿಲ್ಲ ಎಂದು ವೈದ್ಯಾಧಿಕಾರಿಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು. ಇದರಿಂದ ಅಲ್ಲಿನ ವೈದ್ಯಾಧಿಕಾರಿಗಳು ಇಲ್ಲ ಸರ್‌ ನಾವು ಯಾವುದೇ ಹಣ ಪಡೆದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಸದೇ ಸಮಯದಲ್ಲಿ ಊರಿನ ಎಲ್ಲ ಮಹಿಳೆಯರು ಹಾಗೂ ಸುತ್ತಲಿನ ಗ್ರಾಮಸ್ಥರು ಕೂಡಲೇ ಆಸ್ಪತ್ರೆಗೆ ಓಡಿ ಬಂದರೂ. ಆಸ್ಪತ್ರೆಯ ಕರ್ಮ ಕಾಂಡವನ್ನು ಎಲ್ಲವನ್ನು ಬಿಡಿ-ಬಿಡಿಯಾಗಿ ಸಚಿವರ ಮುಂದೆ ಹೇಳುತ್ತಾ ಮಂತ್ರಿ ಸಾಹೇಬರೇ ನಾವು ಈ ಆಸ್ಪತ್ರೆಗೆ ಬಂದರೆ ಇಲ್ಲಿನ ಡಾಕ್ಟರಪ್ಪ ಹಾಗೂ ನರ್ಸುಗಳು ಹಣ ತಂದಿದ್ದಿದ್ದರೆ ಮಾತ್ರ ಆಸ್ಪತ್ರೆಗೆ ಬನ್ನಿ ಇಲ್ಲವಾದರೆ ಖಾಸಗಿ ಆಸ್ಪತ್ರೆಗೆ ಹೋಗಿರಿ ಇಲ್ಲಿ ಯಾವುದೇ ಔಷಧಿಇಲ್ಲ ಹಾಗೂ ಸಲಾಯನ್‌ ಇಲ್ಲ ಎಂದು ಬೆದರಿಕೆ ಹಾಕುತ್ತಾರೆ ಸಾಹೇಬ್ರೆ ಆದರೆ ನಾವು ಹೆರಿಗೆ ಹಾಗೂ ಆರಾಮ ತಪ್ಪಿದರೆ ನಮ್ಮಲ್ಲಿ ಹಣ ಇಲ್ರಿ ಸಾಹೇಬ್ರೆ ನಾವು ಬಡವರು ಇದ್ದೇವ್ರಿ, ಆದರೆ ಸರಕಾರದ ದವಾಖಾನೆ ಇದೆ. ಇದನ್ನು ನಾವು ಬಿಟ್ರೆ ನಮಗೆ ಗತಿಯಿಲ್ರಿ ಸರ್‌ ಎಂದು ಮಹಿಳೆಯರು ಸಚಿವರ ಮುಂದೆ ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಈ ಎಲ್ಲ ವಿಷಯವನ್ನು ತಿಳಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ವೈದ್ಯಾಧಿಕಾರಿಗೆ ಹಾಗೂ ನರ್ಸುಗಳಿಗೆ ಸಭೆ ನಡೆಸಿ ನಿಮ್ಮ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಹಾಗೂ ಇಗಲೇ ನಿಮ್ಮನ್ನು ಅಮಾನತು ಮಾಡಲಾಗುವುದು ಎಂದು ಸೂಚನೆ ನೀಡಿದರು. ಇದರಿಂದ ಅಲ್ಲಿನ ಸಿಬ್ಬಂಧಿಯವರು ಇದು ಮುಂದೆ ಆಗದ ಹಾಗೇ ನೋಡಿಕೊಳ್ಳುತ್ತೇವೆ ಎಂದು ಸಚಿವರಿಗೆ ವಿನಂತಿಸಿದರು. ಆದರೆ ಸಚಿವರು ಈ ರೀತಿ ಸಮಸ್ಯೆಗಳು ನನಗೆ ಕಂಡು ಬಂದರೆ ಕೂಡಲೇ ಸ್ಥಳದಲ್ಲಿಯೇ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರಕಾರವು ಗ್ರಾಮಿಣ ಭಾಗದಲ್ಲಿ ಸರಕಾರಿ ಆಸ್ಪತ್ರೆಯನ್ನು ಆರಂಭಿಸಿದ್ದು ಬಡವರಿಗಾಗಿ ವೈದ್ಯಾಧಿಕಾರಿಗಳು ಸರಕಾರದ ಸಂಭಳವನ್ನು ಪಡೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳುವ ನೈತಿಕ ಹಕ್ಕಿಲ್ಲ ಎಂದು ತರಾಟೆಗೆ ತಗೆದುಕೊಂಡರು, ಹಾಗೂ ಗ್ರಾಮಸ್ಥರಿಗೆ ಸಚಿವರು ಮನವಿ ಮಾಡಿಕೊಂಡು ಇನ್ನುಂದೆ ಈರೀತಿ ಆಗದ ಹಾಗೆ ನೋಡುತ್ತಾರೆ. ಮತ್ತೇ ಏನಾದರೂ ಸಮಸ್ಯೆ ಆದರೆ ಕೂಡಲೇ ನನ್ನ ನಂಬರಿಗೆ ಪೊನ ಮಾಡಿ ಮುಂದಿನ ಕ್ರಮ ನಾನು ತಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಎಂ.ಎನ್‌ ಧಾರವಾಡಕರ ಹಾಗೂ ಸಿಬ್ಬಂಧಿ ವರ್ಗದವರು ಇದ್ದರು.

loading...