ಆಸಕ್ತಿ ಕ್ಷೆÃತ್ರದಲ್ಲಿ ಕೌಶಲ ವೃದ್ಧಿಸಿಕೊಳ್ಳಿ

0
6
loading...

ಬೆಳಗಾವಿ:- ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆಗಳಿರುತ್ತವೆ. ಆಪ್ರತಿಭೆಗಳಿಗೆ ಅವಕಾಶ ದೊರೆತರೆ ವಿಕಲಚೇತನರು ಸಹ ಸ್ವಾವಲಂಬಿಗಳಾಗಬಹುದು ಎಂದು ಕ್ಯಾನರಾ ಬ್ಯಾಂಕಿನ ನಿವೃತ್ತ ಮ್ಯಾನೇಜರ ಬಸವರಾಜ ಸಸಾಲಟ್ಟಿ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ದಿ ಅಸೋಸಿಯೇಷನ ಆಪ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ದೇವರಾಜ ಅರಸ ಬಡಾವಣೆಯ ನಾಗನೂರು ಶಿವಬಸವೇಶ್ವರ ಟ್ರಸ್ಟಿನ ಚಿನ್ನಮ್ಮಾ ಬ ಹಿರೇಮಠ ವೃದ್ಧಾಶ್ರಮದಲ್ಲಿ ಆಯೋಜಿಸಿದ ಜೀವನೋಪಾಯ ತರಬೇತಿ ಮತ್ತು ಉದ್ಯೊÃಗ ಯೋಜನೆಯಡಿ ವಿಕಲಚೇತನರಿಗೆ ಒಂದು ತಿಂಗಳ ಜೀವನ ಕೌಶಲ ಮತ್ತು ಉದ್ಯೊÃಗ ಪೂರ್ವ ತರಬೇತಿಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎನ್. ಡೋಣಿ ಮಾತನಾಡಿ ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶದ ಅಗತ್ಯತೆ ಇದೆ. ಅವರ ಸ್ವಾವಲಂಬನೆಗೆ ಕೌಶಲ ತರಬೇತಿಗಳು ಪೂರಕವಾಗಿವೆ. ಉದ್ಯೊÃಗದಲ್ಲಿ ಯಶ್ವಸಿಯಾಗಲು ಸಂಪನ್ಮೂಲಗಳ ಬಳಕೆ, ಸಮಯ ಪ್ರಜ್ಞೆ, ಶ್ರದ್ದೆ ಉತ್ತಮ ಸಂವಹನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.  ಸಂಸ್ಥೆಯ ಆಡಳಿತ ಮಂಡಳಿಯಯ ಸದಸ್ಯರಾದ ಶ್ರಿÃಮತಿ ಭಾರತಿ ಕೊಟಬಾಗಿ, ಜೀವನೋಪಾಯ ತರಬೇತಿ ಮತ್ತು ಉದ್ಯೊÃಗ ಯೋಜನೆಯ ಸಂಯೋಜಕ ಸಂತೋಷ ಬಡಿಗೇರ, ಉಪಸ್ಥಿತರಿದ್ದರು.

loading...