ಇಂಡಿ-ಖೇಡಗಿ ಗ್ರಾಮಕ್ಕೆ ಸರಿಯಾಗಿ ಬಸ್ ಬಿಡುವಂತೆ ಒತ್ತಾಯ

0
9
loading...

ಇಂಡಿ: ತಾಲೂಕಿನ ಸಾತಗಾಂವ ಪಿಐ ಗ್ರಾಮದಲ್ಲಿ ಶುಕ್ರವಾರದಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ದಿಂದ ಇಂದು ಇಂಡಿಯಿಂದ ಖೇಡಗಿ ಮಾರ್ಗವಾಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾಗಿ ಬರುತ್ತಿಲ್ಲ ಎಂದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಖೇಡಗಿ ಹಾಗೂ ರೋಡಗಿ ಮಾರ್ಗಗಳ ಬಸ್ಸಗಳು ಸರಿಯಾಗಿ ಸಮಯಕ್ಕೆ ಬರುತ್ತಿಲ್ಲ ಎಂದು ಎಬಿವಿಪಿಯವರಿಂದ ಸುಮಾರು ಐದು ಗಂಟೆಗಳ ಕಾಲ ಬಸ್ಸನ್ನು ತಡೆದು ಪ್ರತಿಭಟನೆಯನ್ನು ಮಾಡಿದರು. ಈ ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ತಾಲೂಕು ಸಂಚಾಲಕರಾದ ಶಂಕರ ಸಿಂಗ್ ಅವರು ಮಾತನಾಡಿ ನಾವು ಹಲವಾರು ದಿನಗಳಿಂದ ಕೆಎಸ್‌ಆರ್‌ಟಿಸಿ ಕಚೇರಿಗೆ ತಿಳಿಸಿದರು ಯಾವುದೇ ಮನವಿಗೆ ಸ್ಪಂದನೆ ಮಾಡಿಲ್ಲ. ಇವುಗಳ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ಹೋಗುವ ಸುಮಾರು ೭೦-೮೦ ಮಕ್ಕಳು ಸರಿಯಾಗಿ ಬಸ್ಸ ಇಲ್ಲದ ಕಾರಣ ತೊಂದರೆಯಾಗುತ್ತಿದೆ. ಹಾಗೂ ಬಸ್ಸಗಳು ಬಂದರೂ ಮಕ್ಕಳಿಗೆ ಜಾಗವಿಲ್ಲದ ಕಾರಣ ಬಸ್ಸ ಮೇಲಗಡೆ ಕುಳಿತು ಹೋಗುವ ಪರಿಸ್ಥಿತಿ ಹೆಚ್ಚಾಗಿದ್ದು ಇದರಿಂದ ಮಕ್ಕಳಿಗೆ ಅನಾಹುತವಾಗುವ ಸಂಭವವಿದೆ ಆದ್ದರಿಂದ ಕೂಡಲೇ ಬಸ್ ಸಮಯು ಸರಿಯಾಗಿ ಹೋಗುವಂತೆ ಅಧಿಕಾರಿಗಳು ಹೇಳಬೇಕು ಹಾಗೂ ಹೆಚ್ಚಿಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಹೀಗೆ ಮುಂದುವರೆದರೆ ಮತ್ತೆÃ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಇಂಡಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ ಎ.ಎಸ್. ಗಜಾಕೋಶ ಭೇಠಿ ನೀಡಿ ಅವರ ಮನವಿಯನ್ನು ಸ್ವಿÃಕರಿಸಿ ಇದನ್ನು ಕೂಡಲೇ ಸರಿಪಡಿಸುವುದಾಗಿ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು. ಈ ಪ್ರತಿಭಟನೆಯಲ್ಲಿ ಕಾವೇರಿ, ಜಾಸ್ಮನ್, ರಾಜಗುರು ದೇವರ ಸೇರಿದಂತೆ ನೂರಾರು ಎಬಿವಿಪಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...