ಉತ್ತರಾಖಂಡದಲ್ಲಿ ಭಾರಿ ಭೂಕುಸಿತ ಮೂವರು ಬಲಿ, 8 ಮಂದಿ ನಾಪತ್ತೆ

0
5
loading...

ಉತ್ತರಾಖಂಡ: ಕೇರಳ ರಾಜ್ಯ ತತ್ತರಿಸಿ ಹೊಗುವಂತೆ ಮಾಡಿದ್ದ ವರುಣನ ಆರ್ಭಟ ಇದೀಗ ಉತ್ತರಾಖಂಡ ರಾಜ್ಯದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಭಾರೀ ಮಳೆಯಾದ ಹಿನ್ನಲೆಯಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದೆ ಎಂದು ಬುಧವಾರ ತಿಳಿದುಬಂದಿದೆ.
ಬುದ ಕೇದಾರ್ ಬಳಿಯ ಕೋಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿ, 8 ಮಂದಿ ಅವಶೇಷಗಳಡಿ ಸುಲುಕಿದ್ದಾರೆಂದು ವರದಿಗಳು ತಿಳಿಸಿವೆ.
ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ದೌಡಾಯಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ಕಾರ್ಯಾಚರಣೆ ವೇಳೆ ಈವರೆಗೂ ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

loading...