ಉಪಸಭಾಪತಿಯಾಗಿ ಹರಿವಂಶ ನಾರಾಯಣ್ ಸಿಂಗ್ ಆಯ್ಕೆ

0
4
New Delhi: NDA candidate for the Deputy Chairman of Rajya Sabha Harivansh Narayan Singh during the Monsoon session of Parliament, in New Delhi on Wednesday, Aug 8, 2018. (PTI Photo/Vijay Verma) (PTI8_8_2018_000140A)
loading...

ನವದೆಹಲಿ: ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ ನಾರಾಯಣ್ ಸಿಂಗ್ ಅವರು ೧೨೫ ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದರು.
ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಇಲ್ಲದೇ ಹೋದರೂ ತನ್ನ ಅಭ್ಯರ್ಥಿಯನ್ನು ತಂತ್ರಗಾರಿಕೆಯಿಂದ ಗೆಲ್ಲಿಸಿಕೊಳ್ಳಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ಕೆ. ಹರಿಪ್ರಸಾದ್ ಅವರು ಸೋಲು ಕಂಡಿದ್ದಾರೆ. ಹರಿವಂಶ್ ಅವರು ೨೦ ಮತಗಳಿಂದ ಹರಿಪ್ರಸಾದ್‌ರನ್ನು ಮಣಿಸಿದ್ದಾರೆ.
ರಾಜ್ಯ ಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ ೨೪೪ ಆಗಿದ್ದು, ಉಪ ಸಭಾಪತಿಯಾಗಲು ೧೨೩ ಮ್ಯಾಜಿಕ್ ನಂಬರ್ ಆಗಿತ್ತು. ಬಿಜೆಪಿಯು ೭೩ ಸದಸ್ಯರ ಸಂಖ್ಯಾಬಲ ಹೊಂದಿದ್ದರೂ ಮ್ಯಾಜಿಕ್ ನಂಬರ್ ಪಡೆಯಲು ಹರಸಾಹಸ ಪಡಬೇಕಾಯಿತು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿ ನೇತೃತ್ವ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು. ಜೆಡಿಯುನ ೬ , ಶಿವಸೇನೆಯ ೩, ಅಕಾಲಿದಳದ ೩ ಬಿಜೆಡಿಯ ೯ ಸೇರಿದಂತೆ ಇತರೆ ಒಕ್ಕೂಟ ಪಕ್ಷಗಳು ಹಾಗೂ ನಾಮನಿರ್ದೇಶಿತ ಸದಸ್ಯರ ಬೆಂಬಲದಿಂದ ಎನ್‌ಡಿಎ ಗೆಲವು ಸಾಧಿಸಿದೆ.

loading...