ಎಸ್‌ಸಿ,ಎಸ್‌ಟಿ ಅಧಿಕಾರಿ ಮೀಸಲಾತಿ ಬಡ್ತಿಗೆ ಶಂಕರ ಮುನ್ನವಳ್ಳಿ ಆಗ್ರಹ

0
2
loading...

ಸಪ್ಟೆಂಬರ್ ೩೦ ರಂದು ದಲಿತರ ಬೃಹತ್ ಸಮಾವೇಶ | ಪರಂ ಒಬ್ಬ ಹೆಡಿ ಪ್ರಾಣಿ
ಕನ್ನಡಮ್ಮ ಸುದ್ದಿ ಬೆಳಗಾವಿ: ರಾಜ್ಯದಲ್ಲಿ ಎಸ್‌ಸಿ,ಎಸ್‌ಟಿ ಮೀಸಲಾತಿಯಲ್ಲಿ ಬಡ್ತಿ ಹೊಂದಿದ ರಾಜ್ಯ ಸರಕಾರ ನೌಕರರ ಹಿಂಬಡ್ತಿ ಮಾಡುವ ಉದ್ದಟತನವನ್ನು ತಡೆಯಲು ಮೀಸಲಾತಿ ಕ್ಷೆÃತ್ರಗಳಿಂದ ಚುನಾಯತರಾಗಿರುವ ಜನಪತ್ರಿನಿಧಿಗಳು ಪ್ರಯತ್ನ ಮಾಡದೇ ಇರುವುದು ಖಂಡಿನೀಯ ಎಂದು ಮಾಜಿ ಕೆ.ಪಿ.ಸಿ.ಸಿ ಸದಸ್ಯರಾದ ಶಂಕರ ಮುನ್ನವಳ್ಳಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಎಸ್‌ಸಿ.ಎಸ್‌ಟಿ ಜನತೆಗೆ ಮೋಸ ಮಾಡುತ್ತಿದೆ ಮೈತ್ರಿ ಸರಕಾರದಿಂದ ಮತ್ತಷ್ಟೂ ದಲಿತರನ್ನೂ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಮ್ಮ ಜನತೆಗೆ ಪರ ನ್ಯಾಯಾಲಯದಲ್ಲಿ ಮಾತನಾಡುವ ಸಮರ್ಥ ವಕೀಲರು ಇಲ್ಲದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೀನಾಯವಾಗಿ ಹಿನ್ನಡೆ ಅನುಭವಿಸದಂತಾಗುತ್ತಿದೆ. ಅಗಷ್ಟ ೩೧ ರ ಒಳಗೆ ವಾದ ಮಂಡಿಸಲು ಸಮರ್ಥ ವಕೀಲರನ್ನು ನೇಮಿಸಬೇಕು.
ಬರುವ ಸ್ಥಳೀಯ ಚುನಾವಣೆಯಲ್ಲಿ ದಲಿತ ಸಮುದಾಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಹೀನಾಯ ಸೋಲು ಎದುರಾಗುಬ ಸ್ಥಿÃತಿ ಬಂದರೂ ಅಚ್ಚರಿ ಪಡುವಂತ್ತಿಲ್ಲ ಎಂದು ಗುಡುಗಿದರು.
ಆಯ್ಕೆಯಾದ ಶಾಸಕರು ಗುಲಾಮಗೀರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಣಗಳಿಸುವರದಲ್ಲಿ ಸಮಯ ವ್ಯರ್ಥಮಾಡುತ್ತಾರೆ ಹೊರತು ಪಡಿಸಿ, ಸಮಾಜ ಅಭಿವೃದ್ದಿಗೆ ಭಾಗಿಯಾಗುದಿಲ್ಲ. ದಲಿತರಿಗೆ ಅನ್ಯಾಯವಾದರೂ ಮಲ್ಲಿಕಾರ್ಜುನ ಖರ್ಗೆ, ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಅವರು ನ್ಯಾಯ ಕೊಡುಸುವ ಯಾವ ಪ್ರಯತ್ನಕ್ಕೂ ಕೈ ಹಾಕಿಲ್ಲ ಇಂತಹ ನಾಯಕರಿಂದಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಸಿಗುತ್ತಿಲ್ಲ.
ದಲಿತರಿಗೆ ರಕ್ಷಣೆ ಹಾಗೂ ಬೆಂಬಲ ನೀಡದ ಮುಖ್ಯಂಮತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಜಾತಿ ನಿಂದನೆ ಮಾಡುತ್ತಿದ್ದಾರೆ.
ಮಾನ್ಯತೆ ಇಲ್ಲದ ಮುಖ್ಯಂಮತ್ರಿ ಕುಮಾರಸ್ವಾಮಿ ದಲಿತರನ್ನು ಹತ್ತಿಕ್ಕುತ್ತಿದ್ದಾರೆ. ೧೫೦ ದಲಿತ ಸಮುದಾಯಕ್ಕೆ ಕನಿಷ್ಠ ಮೀಸಲಾತಿ ಸಿಗಲಿಲ್ಲಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ನೂರನ್ನೂ ನೂರೂ ದಲಿತರೆ ತುಳಿದು ಹಾಕುತ್ತಾರೆ ಎಚ್ಚರ ಇರಲಿ ಎಂದು ಆಕ್ರೊÃಶ ಹೊರಹಾಕಿದರು.
ಪರಿಶಿಷ್ಟ ಜಾತಿಯಲ್ಲಿ ೧೦೧ ಮತ್ತು ಪರಿಶಿಷ್ಟ ಪಂಗಡಲ್ಲಿ ೫೧ ಉಪ ಜಾತಿಗಳಿವೆ, ಶೇಕಡಾ ೧೮ ರಷ್ಟು ಮೀಸಲಾತಿ ಯಾವುದಕ್ಕೂ ಸಾಲದು. ಅದಕ್ಕಾಗಿ ವಿಧಾನ ಸಭೆಯಲ್ಲಿ ೧೧೨ ಕ್ಷೆÃತ್ರಗಳಲ್ಲಿ ದಲಿತರಿಗೆ ಸ್ಥಾನ ನೀಡಬೇಕು. ಈ ರಾಜ್ಯದ ಲೋಕಸಭಾ ಕ್ಷೆÃತ್ರಗಳಲ್ಲಿ ೧೪ ಕ್ಷೆÃತ್ರಗಳ ಅವಶ್ಯಕತೆ ಇದೆ ಅದಕ್ಕಾದರೂ ರಾಜ್ಯ ಸರಕಾರ ಮನ್ನಿಯ ಬೇಕೆಂದರು. ಸಪ್ಟೆಂಬರ್ ೩೦ ರಂದು ದಾವಣಗೆರೆಯಲ್ಲಿ ಬೃಹತ್ ದಲಿತರ ಸಮಾವೇಶವನ್ನು ಮಾಡಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು.
ಸದಾಶಿವ ಆಯೋಗ ವರದಿ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬೆಂಕಿ ಹಚ್ಚುವುದನ್ನು ಬೀಡಬೇಕು. ಪರಂ ಒಬ್ಬ ಹೇಡಿ ಪ್ರಾಣಿ ದಲಿತರ ಮೇಲೆ ಅವರಿಗೆ ಕಳಕಳಿಲ್ಲ ಎಚ್.ಡಿ ರೇವಣ್ಣ ಕೂಡ ಭ್ರಷ್ಟ ನಾಯಕ ಇಂತಹ ನಾಯಕರನ್ನು ಕಿವಿಹಿಂಡುವಲ್ಲಿ ಸಚಿವರಾದ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಮುಂದಾಗಬೇಕು ಎಂದು ಶಂಕರ ಮುನ್ನವಳ್ಳಿ ಗುಡುಗಿದರು.
ಈ ಸಂದರ್ಭದಲ್ಲಿ ರಾಹುಲ ಮೇತ್ರಿ, ಕಲ್ಲಪ್ಪಾ ಕಾಂಬಳೆ, ಗೌತಮ ಪಾಟೀಲ, ಸಿದ್ದಪ್ಪಾ ಕಾಂಬಳೆ, ಅಶೋಕ ಐನಾವರ ಮಹಾಲಿಂಗಪ್ಪ ಕೋಲಕಾರ ಹಾಗೂ ಉಪಸ್ಥಿತರಿದ್ದರು.

loading...