ಏಕತೆಗೆ ಭಂಗ ತರುವ ಚಟುವಟಿಕೆ ವಿರುದ್ಧ ಸಮರ

0
6
loading...

ಕನ್ನಡಮ್ಮ ಸುದ್ದಿ-ಧಾರವಾಡ: ಅಖಂಡ ಕರ್ನಾಟಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದೆ ಕರ್ನಾಟಕ ನವನಿರ್ಮಾಣ ಸೇನೆಯಿಂದ ಧರಣಿ ಸತ್ಯಾಗ್ರಹ ಕೈಗೊಂಡಿತು.
ಹಿರಿಯ, ತ್ಯಾಗ ಮತ್ತು ಬಲಿದಾನಗಳ ಫಲವಾಗಿ ರೂಪಗೊಂಡ ಕರ್ನಾಟಕವನ್ನು ಕೇವಲ ಕೆಲವೇ ಕೆಲವು ರಾಜಕೀಯ ಪ್ರೇರಿತ ದುಷ್ಟ ಶಕ್ತಿಗಳು ಅಭಿವೃದ್ಧಿಯ ನೆಪದಲ್ಲಿ ಒಡೆಯುವ ಹಾಗೂ ಕರ್ನಾಟಕದ ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುತ್ತಲಿವೆ. ಕರ್ನಾಟಕ ಏಕೀಕರಣಗೊಂಡು 70 ವರ್ಷ ಕಳೆಯುತ್ತಾ ಬಂದರು ಕರ್ನಾಟಕಕ್ಕೆ ಸೇರಬೇಕಾದ ಪ್ರದೇಶಗಳು ಇನ್ನು ಕರ್ನಾಟಕದ ಆಚೆಯೇ ಉಳಿದಿವೆ. ಕನ್ನಡಿಗರೇ ನೆಲೆಸಿರುವ ಬೆಳಗಾವಿ ಬಗ್ಗೆ ವಿನಾಕರಣ ಮರಾಠಿ ಜನರು ವಿವಾದ ಸೃಷ್ಟಿಸಿ ಅದನ್ನು ಸುಪ್ರೀಂ ಕೋರ್ಟ್ ಹಂತದವರೆಗೂ ತೆಗೆದುಕೊಂಡು ಹೋಗಲಾಯಿತು. ಅದರ ವಿರುದ್ಧ ಹೋರಾಡಿ ಕನ್ನಡಿಗರ ಸ್ವಾಭಿಮಾನದ ಬೆಳಗಾವಿಯನ್ನು ಕರ್ನಾಟಕದ ಭೂಪಟದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಬೆಳಗಾವಿ ಕನ್ನಡಿಗರೆಲ್ಲರೂ ನಿತ್ಯವೂ ಹಂಬಲಿಸುತ್ತಿದ್ದರೆ. ನಾಡಿನ ಇತಿಹಾಸದ ಜ್ಞಾನವಿಲ್ಲದ ಜನ ಇದೆಲ್ಲವನ್ನು ಬದಿಗೋತ್ತಿ ರಾಜಕೀಯ ಸ್ವಾರ್ಥ ಸಾಧನೆಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜಕ್ಕೆ ಒತ್ತಾಯಿಸುತ್ತಿದ್ದಾರೆ.
ಇದು ಜನರ ಕೂಗಲ್ಲ. ಇದು ರಾಜಕೀಯ ಪ್ರೇರಿತ ವ್ಯಕ್ತಿಗಳ ಸಂಚಿನ ಕೂಗು, ಇದಕ್ಕೆ ಅಖಂಡ ಧಾರವಾಡ ಜಿಲ್ಲೆಯ ಜನ ಯಾವತ್ತೂ ಕಿವಿಗೊಡುವುದಿಲ್ಲ. ಕರ್ನಾಟಕದ ಏಕತೆಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳು ಜಿಲ್ಲೆಯಲ್ಲಿ ಯಾರೇ ಮಾಡಿದರೂ ಅವರ ವಿರುದ್ಧ ಕರ್ನಾಟಕ ನವನಿರ್ಮಾಣ ಸೇನೆ ಸಮರ ಸಾರಿ ತಕ್ಕ ಪಾಠ ಕಲಿಸಲು ಸಿದ್ಧವಿದೆ ಎಂದು ಎಚ್ಚರಿಸಿತು.

loading...