ಏಳು ಮಂದಿಯನ್ನು ಅಪಹರಿಸಿದ ಉಗ್ರರು

0
0
loading...

ನವದೆಹಲಿ: ಕಣಿವೆ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಲೇ ಇದ್ದಾರೆ. ಪ್ರತಿದಿನ ಗಡಿ ಒಳನುಸುಳುವಿಕೆ, ಗುಂಡಿನ ದಾಳಿಯಂತಹ ವಿಕೃತಿ ತೋರುತ್ತಿರುವ ಉಗ್ರರು, ಈಗ ರಾಜಾರೋಷವಾಗಿ ಐವರು ಪೊಲೀಸರ ಮನೆಗಳಿಗೆ ನುಗ್ಗಿ, ಅವರ ಕುಟುಂಬಗಳ ಏಳು ಮಂದಿಯನ್ನು ಅಪಹರಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪೊಲೀಸರ ಮನೆಗಳಿಗೆ ನುಗ್ಗಿದ್ದ ಉಗ್ರರು,ಏಳು ಮಂದಿಯನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸ್‍ವೊಬ್ಬರನ್ನು ಅಪಹರಿಸಿದ್ದ ಉಗ್ರರು, ಥಳಿಸಿ ನಂತರ ಬಿಡುಗಡೆ ಮಾಡಿದ್ದರು. ನಂತರ ಪೊಲೀಸರ ಕುಟುಂಬಸ್ಥರ ಮನೆಗಳಿಗೆ ನುಗ್ಗಿ ಏಳು ಮಂದಿಯನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯು ಹಲವು ಕಡೆ ದಾಳಿ ನಡೆಸಿ, ಕೆಲ ಉಗ್ರರ ಸಂಬಂಧಿಕರನ್ನು ಬಂಧಿಸಿದ್ದಾರೆ.
ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು,ಅದೇ ಏರಿಯಾದಲ್ಲಿರುವ ಇಬ್ಬರು ಉಗ್ರರ ಮನೆಗಳಿಗೆ ಬೆಂಕಿ ಇಟ್ಟರು ಎನ್ನಲಾಗಿದೆ.ಆದರೆ ಈ ಕೃತ್ಯವನ್ನು ಭದ್ರತಾ ಪಡೆಯೇ ಮಾಡಿತು ಎಂದು ಸ್ಥಳೀಯರು ಪ್ರತ್ಯಾರೋಪ ಮಾಡಿದ್ದಾರೆ.

loading...