ಒಂದೇ ಸೂರಿನಡಿ ಎಲ್ಲ ಸೇವೆಗಳ ಕೇಂದ್ರ ಉದ್ಘಾಟನೆ

0
6
loading...

ಬಾಗಲಕೋಟೆ: ಕಟ್ಟಡಗಳಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ದೊರೆಯುವ ಡಿಸೈನ್‌ & ಕನ್ಸಟ್ರಕ್ಷನ್‌ ಸರ್ವಿಸ್‌ ಅಂಡರ್‌ ಒನ್‌ ರೂಫ್‌ ಕೇಂದ್ರವನ್ನು ಬಾಗಲಕೋಟೆಯ ನವನಗರದಲ್ಲಿ ಆರಂಭಗೊಂಡ ಕೇಂದ್ರವನ್ನು ಗುರುವಾರ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲ ಸೇವೆಗಳು ಒಂದೇ ಸ್ಥಳದಲ್ಲಿ ದೊರೆಯುವುದರಿಂದ ಸಾಕಷ್ಟು ಸಮಯ ಹಾಗೂ ವೆಚ್ಚದ ಉಳಿತಾಯವಾಗುತ್ತದೆ. ಇಂತಹ ಸೇವೆಗಳ ಅವಶ್ಯಕತೆಯು ಇದ್ದು, ಈ ಕೇಂದ್ರದಿಂದಎಲ್ಲ ಸೇವೆಗಳನ್ನು ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕೇಂದ್ರದ ವಿಕ್ರಮ ರುಣವಾಲ ಅವರು ಮಾತನಾಡಿ, ಈ ಕೇಂದ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಆರ್ಕಿಟೆಕ್ಚರ್‌ ಡಿಸೈನ್‌, ಸ್ಟ್ರಕ್ಚರಲ್‌ ಡಿಸೈನ್‌, ಇಂಟಿರಿಯರ್‌ ಡಿಸೈನ್‌, 3ಡಿ ವಾಕ್‌ಥ್ರೂ, ಸಿವ್ಹಿಲ್‌ & ಇಂಟಿರಿಯರ್‌ ಕಾಂಟ್ರಾಕ್ಟ÷್ಸ, ಪ್ರೊಜೆಕ್ಟ್‌ ಮ್ಯಾನೇಜ್‌ಮೆಂಟ್‌, ಟೆಕ್ನಿಕಲ್‌ ಸೂಪರವಿಷನ್‌, ಲ್ಯಾಂಡ್‌ಸ್ಕೇಪ್‌ ಡಿಸೈನ್‌, ಲೇಔಟ್‌ ಡಿಸೈನ್‌ ಮತ್ತು ಡೆವಲಪ್‌ಮೆಂಟ್‌ ಸೇವೆಗಳು ಲಭ್ಯವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರವೀಣ ರುಣವಾಲ, ನಿತಿನ ರುಣವಾಲ, ಮಳಸಿದ್ದಪ್ಪ ಪಾಟೀಲ, ಬಸವರಾಜ ಸರಸಂಬಿ, ವಿಠ್ಠಲ ರೆಲೆಕರ, ಕೇಂದ್ರದ ಧನಂಜಯ ರೆಲೆಕರ, ಅರುಣ ಸರಸಂಬಿ, ಸಚಿನ್‌ ಪಾಟೀಲ, ನಿಜಗುಣ ಗಡಗಿ, ಅಜಿಂಕ್ಯಾ ದೇವಲ್‌, ಗಿರೀಶ ಗಲಗಲಿ, ಪವನ ಅಜುರ ಇತರರು ಉಪಸ್ಥಿತರಿದ್ದರು.

loading...