ಕಂಚು ಗೆದ್ದ ಮಲಪ್ರಭಾಗೆ ಮೋದಿ ಅಭಿನಂದನೆ

0
2
loading...

ನವದೆಹಲಿ: ಇಂಡೋನೇಷಿಯಾದ ಜಕಾರ್ತನಲ್ಲಿ ನಡೆಯುತ್ತಿರುವ ೧೮ ಏಷ್ಯನ್ ಗೇಮ್ಸ್ ಕ್ರಿÃಡಾಕೂಟದಲ್ಲಿ ಕುರಾಶ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಕುಂದಾನಗರಿ ಬೆಳಗಾವಿ ಹೆಸರು ಅಂತರಾಷ್ಟಿçÃಯ ಮಟ್ಟದಲ್ಲಿ ಪರಿಚಯಿಸಿದ್ದಾರೆ. ರೈತನ ಪುತ್ರಿಯಾಗಿರುವ ಮಲಪ್ರಭಾ ಜಾಧವ್ ಅವರುಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ದೇಶಕ್ಕೆ ಕಂಚಿನ ಪದಕ ಗಳಿಸಿಕೊಟ್ಟ ಮಲಪ್ರಭಾ ಅವರಿಗೆ ಅಭಿನಂದನೆಗಳು, ಮಲಪ್ರಭಾ ಅವರದು ಮಹತ್ವದ ಸಾಧನೆಯಾಗಿದೆ ಎಂದು ನರೇಂದ್ರ ಮೋದಿ ಟ್ವಿÃಟ್ ಮಾಡಿದ್ದಾರೆ.
ಜೂಡೋ ಮಾದರಿಯ ಕುರಾಶ್ ಕ್ರಿÃಡೆ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ನಲ್ಲಿ ಸೇರ್ಪಡೆಗೊಂಡಿದೆ.
ಸ್ಪರ್ಧೆಯ ೫೨ ಕೆಜಿ ವಿಭಾಗದಲ್ಲಿ ಬೆಳಗಾವಿಯ ಮಲಪ್ರಭಾ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ.
೧೯ ವರ್ಷದ ಮಲಪ್ರಭಾ ವಿಶ್ವ ನಂಬರ್ ೧ ಉಜ್‌ಬೇಕಿಸ್ತಾನದ ಕ್ರಿÃಡಾಳುವಿನ ವಿರುದ್ಧ ಸೋಲನುಭವಿಸಿ ಕಂಚಿಒನ ಪದಕ ಗಳಿಸಿದರು.

loading...