ಕಂಪನಿಗೆ ಲಕ್ಷಾಂತರ ರೂ.ಗಳ ಪಂಗನಾಮ ಹಾಕಿದ ಆಸಾಮಿ

0
10
loading...

ರಬಕವಿ-ಬನಹಟ್ಟಿ: ಈ ಆಸಾಮಿ ಅಂತಿಂಥಾ ಮನುಷ್ಯನಲ್ಲ. ಬಣ್ಣದ ಮಾತುಗಳನ್ನಾಡುವವರನ್ನು ನೋಡಿದ್ದೀರಿ. ಬಣ್ಣ ಬಣ್ಣದ ಕಾರ್ಯಗಳನ್ನು ಮಾಡಿದ ಆಸಾಮಿಯನ್ನು ನೋಡಿದ್ದೀರಾ..? ಇಲ್ಲಿದ್ದಾನೆ ನೋಡಿ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಗಾಂಧಿ ವೃತ್ತದ ಬಳಿ ರಾಯಲ್ ಟ್ರೇಡರ್ಸ್ ಮತ್ತು ಆರ್ಡರ್ ಸಪ್ಲಾಯರ್ಸ್ ಎಂಬ ಫಲಕದೊಂದಿಗೆ ಪ್ರಾರಂಭಿಸಿದ ಖಾಸಗಿ ಏಜೆನ್ಸಿಯು ಕೇವಲ ಒಂದೇ ತಿಂಗಳಲ್ಲಿ ಲಕ್ಷಾಂತರ ರೂ.ಗಳನ್ನು ಬಾಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಮೂಲತಃ ತಮಿಳನಾಡು ರಾಜ್ಯದವನೆನ್ನಲಾದ ಮನೋಜ ಎಂಬಾತನು ಜಗತ್ತಿನ ಸುಪ್ರಸಿದ್ಧ ಕಂಪನಿಗಳ ಮೊಬೈಲ್, ಟಿವಿ, ಫ್ರಿಜ್, ವಾಷಿಂಗ್ ಮಶಿನ್ ಸೇರಿದಂತೆ ಮನೆ ಸಾಮಗ್ರಿಗಳನ್ನು ಅರ್ಧ ಬೆಲೆಯಷ್ಟು ಕಡಿಮೆ ದರದಲ್ಲಿ ಒದಗಿಸುವದಾಗಿ ತಿಳಿಸಿ ಹಣ ಪಡೆಯಲು ಪ್ರಾರಂಭಿಸಿದ್ದಾನೆ. ಹಣ ಪಡೆದು 10 ದಿನಗಳ ನಂತರ ಸಾಮಗ್ರಿ ಒದಗಿಸುವ ಯೋಜನೆ ಈ ಆಸಾಮಿಯದ್ದಾಗಿದ್ದು, ಅದರಂತೆ ಮೊದಲ ಒಂದು ವಾರ ಕಾಲ ಸ್ವೀಕೃತಿ ಮಾಡಿಕೊಂಡ ಫಲಾನುಭವಿಗಳಿಗೆ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ಒದಗಿಸಿದ್ದಾನೆ. ಇದನ್ನೇ ನಂಬಿದ ಜತೆ ದುಪ್ಪಟ್ಟು ಹಣ ತುಂಬಿ ರಬಕವಿ-ಬನಹಟ್ಟಿ, ಜಮಖಂಡಿ ಹಾಗು ಸುತ್ತಲಿನ ಗ್ರಾಮಗಳ ಜನತೆ ವಿಶ್ವಾಸಕ್ಕೆ ಬಿದ್ದು, ಅನೇಕ ಸಾಮಗ್ರಿಗಳನ್ನು ಪಡೆಯಲು ಸಾಲ ಮಾಡಿ ಈತನ ಬಳಿ ಹಣ ತುಂಬಿ ಪಾವತಿ ಪಡೆದಿದ್ದಾರೆ. ಅಂದಾಜು 60-70 ಲಕ್ಷ ರೂ.ಗಳಷ್ಟು ಹಣ ಪಡೆದು ಸಾಮಗ್ರಿ ಒದಗಿಸುವದಾಗಿ ತಿಳಿಸಿ, ಸೋಮವಾರ ರಾತ್ರೋ ರಾತ್ರಿ ಪಟ್ಟಣದಿಂದ ಪಲಾಯನಗೈದು ಫಲಾನುಭವಿಗಳ ಕೈಗೆ ಬರೀ ಪಾವತಿ ಮಾತ್ರ ಇರುವಲ್ಲಿ ಕಾರಣವಾಗಿದೆ.

ಮಂಗಳವಾರ ಬೆಳ್ಳಂಬೆಳಿಗ್ಗೆ ಈ ಸುದ್ದಿ ಹರಡುತ್ತಿದ್ದಂತೆ, ಸಾವಿರಾರು ಫಲಾನುಭವಿಗಳು ಅಂಗಡಿಯತ್ತ ಮಹಿಳಾ ಮಣಿಗಳು ಸೇರಿದಂತೆ ಆಗಮಿಸುತ್ತಿದ್ದಂತೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗಲಭೆಯನ್ನು ತಡೆಯಲು ಯಶಸ್ವಿಯಾಗಿ, ಈ ಕುರಿತು ವ್ಯಕ್ತಿಯನ್ನು ಹುಡುಕಿ ತಮಗೆ ನ್ಯಾಯ ಒದಗಿಸುವದಾಗಿ ತಿಳಿಸಿದ್ದಾರೆ.

loading...