ಕರಿಕಟ್ಟಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ

0
0
loading...

ಕರಿಕಟ್ಟಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪೂರ ತಾಲೂಕಿನ ಕರಿಕಟ್ಟಿ ಗ್ರಾಮದಿಂದ ಸ್ಥಳೀಯ ಕಕ್ಕೆÃರಿ ಗ್ರಾಮಕ್ಕೆ ಸಾರಿಗೆ ಸಂಚಾರ ತುಂಬಾ ಅವಶ್ಯಕತೆ ಇದ್ದರು ಸಾರಿಗೆ ಅಧಿಕಾರಿಗಳು ಗ್ರಾಮಕ್ಕೆ ಬೀಡುತ್ತಿಲ್ಲ. ನಮ್ಮ ಗ್ರಾಮಕ್ಕೆ ಸಂಚಾರ ಸಲೂವಾಗಿ ಒಂದು ಬಸನ್ನಾದರೂ ಅನುಕೂಲ ಮಾಡಿಕೊಡಬೇಕೆಂದು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಜಿಲ್ಲಾಧಿಕಾರಿಗಳ ಆವರಣಲ್ಲಿ ಕೆಲಕಾಲ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಜಿಲ್ಲೆಯಲ್ಲಿ ಎಲ್ಲ ಕಡೆಗೂ ಸಾರಿಗೆ ವ್ಯವಸ್ಥೆ ಇದ್ದರು ಖಾನಾಪೂರ ತಾಲೂಕಿನ ಕರಿಕಟ್ಟಿ ಗ್ರಾಮಕ್ಕೆ ಇನ್ನೂ ವರೆಗೆ ಸಾರಿಗೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಲಾಗದೆ ಹಾಗೇ ಬಿಟ್ಟಿದೆ, ಈ ಗ್ರಾಮದ ೬೦-೬೫ ಶಾಲಾ ವಿದ್ಯಾರ್ಥಿಗಳು ಕಾಲೇಜಗಳಿಗೆ ಸಂಚಾರ ಮಾಡುವುದು ತುಂಬಾ ಅನಾನೂಕುಲವಾಗಿದೆ. ಇಲ್ಲಿರುವ ಅವ್ಯವಸ್ಥೆಯು ತಾಲೂಕಿನಲ್ಲಿ ಎಲ್ಲೂ ಇಲ್ಲ ಅನಿಸುತ್ತೆ. ಗ್ರಾಮದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೊÃಗಸ್ಥರು, ಸುಮಾರು ನಾಲ್ಕೆöÊದು ಕಿ.ಮೀ ನಡೆದುಕೊಂಡು ಬೇರೆ ಗ್ರಾಮದಿಂದ ನಗರಕ್ಕೆ ತೆರಳುವ ಪರಿಸ್ಥಿತಿ ಎದುರಾಗುತ್ತಿದೆ.
ದಿನಕ್ಕೆ ಎರಡು ಬಾರಿಯಾದರೂ ಕಕ್ಕೆÃರಿಯಿಂದ ಕರಿಕಟ್ಟಿಗೆ ಗ್ರಾಮಕ್ಕೆ ಬಸ್ ಗಳ ಅನುಕೂಲ ಮಾಡಿಕೊಂಡುವಂತೆ ಮನವಿ ಕೇಳಿಕೊಂಡರು.
ಮಳೆಗಾಲದಿಂದ ವಿದ್ಯಾರ್ಥಿಗಳು ಕಾಲೇಜಗಳಿಗೆ ತೆರಳುವದೇ ಅಪರೂಪವಾಗಿದೆ. ಅದಕ್ಕಾಗಿ ಜಿಲ್ಲಾದಿಕಾರಿಗಳು ಆದಷ್ಟೂ ಬೇಗ ಸಾರಿಗೆ ಇಲಾಖೆ ಅವರ ಗಮನಕ್ಕೆ ತರಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸುಧಾ ಕೊಲಕಾಲ, ಸುಭಾಷ ತಳವಾರ, ಶಂಕರ ತಳವಾರ, ಹನುಮಂತ ಅಮಾಪೂರ, ಎಮ್ ಕಾಟಳೆ ಗ್ರಾಮದ ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.

loading...