ಕರುಣಾ ನಿಧನದ ಬೆನ್ನಲ್ಲೇ ಅಧ್ಯಕ್ಷ ಪಟ್ಟಕ್ಕಾಗಿ ರೇಸ್

0
2
loading...

=ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನದ ಬೆನ್ನಲ್ಲೇ ಡಿಎಂಕೆ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಅವರ ಇಬ್ಬರು ಪುತ್ರರಾದ ಎಂ.ಕೆ. ಸ್ಟಾಲಿನ್ ಹಾಗೂ ಎಂ.ಕೆ. ಅಳಗಿರಿ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಇದರಿಂದಾಗಿ ಪಕ್ಷ ಹೋಳಾಗಲಿದೆಯಾ ಎಂಬ ಆತಂಕ ಕಾರ್ಯಕರ್ತರನ್ನು ಕಾಡತೊಡಗಿದೆ.
ಕರುಣಾನಿಧಿಯವರು ಬದುಕಿದ್ದಾಗಲೇ ಅವರ ಉತ್ತರಾಧಿಕಾರಿಯಾಗಲು ಸ್ಟಾಲಿನ್ ಮತ್ತು ಅಳಗಿರಿ ನಡುವೆ ಪೈಪೋಟಿ ನಡೆದಿತ್ತಾದರೂ ಸ್ಟಾಲಿನ್ ರನ್ನ ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದ ಕರುಣಾನಿಧಿಯವರು, ಅಳಗಿರಿಯನ್ನು ಮಧುರೈ ಭಾಗದಲ್ಲಿ ಪಕ್ಷ ಸಂಘಟನೆಗೆ ನಿಯೋಜಿಸಿದ್ದರು.
ಇದನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ಮಧುರೈಗೆ ತೆರಳಿದ್ದ ಅಳಗಿರಿ, ಈಗ ಕರುಣಾನಿಧಿಯವರ ನಿಧನದ ನಂತರ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ತಮಗೇ ನೀಡುವಂತೆ ಪಟ್ಟು ಹಿಡಿದಿದ್ದಾರೆಂದು ಹೇಳಲಾಗಿದೆ. ಇದಕ್ಕೆ ಸ್ಟಾಲಿನ್ ಮತ್ತವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು, ಹೀಗಾಗಿ ಡಿಎಂಕೆ ಪಕ್ಷ ಎರಡು ಹೋಳಾಗಲಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ.

loading...