ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಶ್ರೀಗಳು

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ಸರಿಯಾದ ರೀತಿಯಲ್ಲಿ ಪ್ರೊತ್ಸಾಹ, ಸಹಕಾರ, ಪುರಸ್ಕಾರ ದೊರೆಯದಿದ್ದ ಕಾರಣ ಕಲಾವಿದರು ಬೆಳಕಿಗೆ ಬರುತ್ತಿಲ್ಲ ಎಂದು ಕಿತ್ತೂರಿನ ಮಡಿವಾಳ ರಾಜಯೊಗಿಂದ್ರ ಸ್ವಾಮೀಜಿ ಹೇಳಿದರು. ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಲೈಟಾಗಿ ಲವ್ವಾಗಿದೆ ಚಲನಚಿತ್ರದ ಪೊಸ್ಟರ್ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಯುಳ್ಳ ಕಲಾವಿದರಿದ್ದು ಬೆಂಗಳೂರ ಹಳೆ ಮೈಸೂರ ಭಾಗದ ಕಲಾವಿದರಿಗೆ ಶರಣರಾಗುವಂತ ಪರಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಧಾರವಾಡದ ಯುವ ಪ್ರತಿಭೆ ಕಲಾವಿದೆ ಶ್ವೆತಾ ಧಾರವಾಡ ದೈರ್ಯದಿಂದ ದುಮುಖಿ ಲೈಟಾಗಿ ಲವ್ವಾಗಿದೆ ಎಂಬ ಚಲನಚಿತ್ರದಲ್ಲಿ ನಟಿಯಾಗಿರುವುದು ಸಂತಸದ ವಿಷಯ. ಕಂಪ್ಯೂಟರ್ ಯುಗದಲ್ಲಿ ವಿಶೇಷವಾಗಿ ಯುವಕ ಯುವತಿಯರ ಜೀವನಾಡಿ ಅದಂತಹ ಮೊಬೈಲ ಹಾವಳಿಯಲ್ಲಿ ತಮ್ಮ ವಾಟ್ಸಪ ಹಾಗೂ ಫೆಸಬುಕ್ಕ ಮತ್ತು ಇಂಟರನೆಟ್‍ನಿಂದ ಜೀವನದ ಮೇಲೆ ದುಷ್ಪ ಪರಿಣಾಮ ಬೀರುತ್ತಿದೆ ಎಂಬುದನ್ನು ಕುರಿತು ಬಹಳ ತಿಳುವಳಿಕೆ ನೀಡುವ ಚಲನಚಿತ್ರ ಇದಾಗಿದೆ. ಇದೊಂದು ಸಮಾಜಕ್ಕೆ ಕೊಡುಗೆಯಾಗಿ ಮಕ್ಕಳು ಉತ್ತಮ ಹಾದಿಯಲ್ಲಿ ಸಾಗಲಿ ಎಂದು ಹೇಳಿದರು.
ಕೃಷ್ಣ ಜೋಶಿ ಅಧ್ಯಕ್ಷತೆವಹಿಸಿ ಮಾತನಾಡಿದರು. ವಸಂತ ಅರ್ಕಾಚಾರ್ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೆಮಠ, ಆನಂದ ಸಿಂಗನಾಥ, ನಿಜನಗೌಡ ಪಾಟೀಲ, ನಿರ್ದೆಶಕರಾದ ಗುರುನಾಥ ಗದಾಡಿ, ಚಿತ್ರನಟಿ ಶ್ವೆತಾ ಧಾರವಾಡ ಉಪಸ್ಥಿತರಿದ್ದರು. ಪ್ರಕಾಶ ಸಬರದ ಸ್ವಾಗತಿಸಿ ನಿರೂಪಿಸಿದರು. ನಾಸಿರ ಎತ್ತಿನಗುಡ್ಡ ವಂದಿಸಿದರು.

loading...