ಕಾಂಗ್ರೆಸ್‍ನ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯ ಸ್ಟಾರ್ ಕ್ಯಾಂಪೇನರ್

0
8
loading...

ಬೆಂಗಳೂರು:ರಾಜ್ಯದಲ್ಲಿ ಯಾವ ಅಲೆಯೂ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಸಚಿವೆ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯ ನಗರಸಭಾ ವಾರ್ಡ್‍ಗಳಿಗೆ ತೆರಳಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿರಬಹುದು.ರಾಜ್ಯದಲ್ಲಿ ಈಗ ಯಾವ ಅಲೆಯೂ ಇಲ್ಲ. ನಾನು ಸ್ಟಾರ್ ಕ್ಯಾಂಪೇನರ್ ಅಲ್ಲ, ಕಾಂಗ್ರೆಸ್‍ನ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಎಂದರು.
ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ.ಹಿಂದಿನ ಸರ್ಕಾರದ ಯೋಜನೆಗಳನ್ನು,ಈಗಿನ ಸಮ್ಮಿಶ್ರ ಸರ್ಕಾರದ ಕೆಲಸಗಳನ್ನು ಕಂಡು ಜನರು ಕಾಂಗ್ರೆಸ್‍ನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.
ರೈತರ ಸಾಲಮನ್ನಾ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತದೆ.ಜಿಲ್ಲೆಯಲ್ಲಿ ನೆರೆ ಬಂದಿದ್ದು,ಉಡುಪಿ ಜಿಲ್ಲೆಗೆ 25 ಕೋಟಿ ನೆರೆ ಪರಿಹಾರ ಈಗಾಗಲೇ ದೊರಕಿದೆ.ಸರ್ಕಾರಕ್ಕೆ 75 ಕೋಟಿಗಾಗಿ ಬೇಡಿಕೆ ಇಟ್ಟಿದ್ದೇವೆ.ಸಮ್ಮಿಶ್ರ ಸರ್ಕಾರ ಜನರ ಪರವಾಗಿದೆ ಅನ್ನೋದು ನಮಗೆ ಹೆಮ್ಮೆ ಎಂದರು.
ಬಿಜೆಪಿಯವರು ಏನೂ ಕೆಲಸ ಮಾಡದೆ ಮತ ಕೇಳುತ್ತಾರೆ.ನಾವು ಕೆಲಸ ಮಾಡಿ ಮತ ಕೇಳುತ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಹೇಳಿದರು.

loading...