ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ದಿಗೆ ಪಣ: ದಳವಾಯಿ

0
1
loading...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ದಿಗೆ ಪಣ: ದಳವಾಯಿ
ಕನ್ನಡಮ್ಮ ಸುದ್ದಿ-ಮೂಡಲಗಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಪಟ್ಟಣದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.
ಅವರು ಮೂಡಲಗಿಯಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಕಾಂಗ್ರೆÃಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪಟ್ಟಣದ ಮಧ್ಯ ಇರುವ ಹಳ್ಳದ ಅಭಿವೃದ್ದಿ ಹಾಗೂ ಸ್ವಚ್ಛತೆ ಕಾರ್ಯ, ನಿವೇಶನ ರಹಿತರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ನಿವೇಶನ ಮತ್ತು ಸೂರು ಕಲ್ಪಿಸಿಕೊಡಲಾಗುವುದು. ಕ್ರಿÃಡಾಂಗಣ ಮತ್ತು ಉದ್ಯಾನ ವನ, ಪಟ್ಟಣದಲ್ಲಿಯ ಜನರಿಗೆ ಸ್ವಚ್ಛ ಶುದ್ದಿಕರಣ ಕುಡಿಯುವ ನೀರಿನ ವ್ಯವಸ್ಥೆ, ದಕ್ಷಿಣ ಭಾರತದಲ್ಲಿ ಪ್ರಸಿದ್ದವಾಗಿರುವ ಸ್ಥಳೀಯ ಜಾನುವಾರ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ಅಧುನಿಕರಣಗೊಳಿಸಲಾಗುವುದು. ನೂತನ ತಾಲೂಕ ಕೇಂದ್ರವಾಗಿರುವ ಮೂಡಲಗಿಗೆ ಬೇಕಾಗುವ ಎಲ್ಲ ಕಛೇರಿಗಳನ್ನು ತರಲಾಗುವುದು. ಕಾಯಿಪಲ್ಯೆ ಮಾರುಕಟ್ಟೆ ಅಭಿವೃದ್ದಿಗೊಳಿಸುವ ಮೂಲಕ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಮುಖಂಡರಾದ ಎಸ್.ಆರ್. ಸೋನವಾಲ್ಕರ, ಭರಮಣ್ಣ ಉಪ್ಪಾರ, ರವಿ ತುಪ್ಪದ, ಭೀಮಶಿ ಮಗದುಮ್ಮ ಉಪಸ್ಥಿತರಿದ್ದರು.

loading...