ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿ: ಸಿದ್ಧರಾಮಯ್ಯ

0
10
loading...

 

ಗುಳೇದಗುಡ್ಡ: ಬಾದಾಮಿ ಮತಕ್ಷೆÃತ್ರದಿಂದ ನನ್ನನ್ನು ಗೆಲ್ಲಿಸಿದ್ದಿರಿ. ನಾನು ನಿಮ್ಮ ಋಣ ತೀರಿಸಬೇಕು. ೫ ವರ್ಷಗಳ ಕಾಲ ಗುಳೇದಗುಡ್ಡ, ಬಾದಾಮಿ, ಕೆರೂರು ಒಳಗೊಂಡು ಸಂಪೂರ್ಣ ಬಾದಾಮಿ ಮತಕ್ಷೆÃತ್ರದಲ್ಲಿನ ರಸ್ತೆ ಕಾಮಗಾರಿ, ಕೆರೆ ತುಂಬಿಸುವುದು, ಗುಳೇ ತಪ್ಪಿಸುವುದು, ನೀರು ಸೇರಿದಂತೆ ಕ್ಷೆÃತ್ರದ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು.
ಅವರು ಗುರುವಾರ ಸ್ಥಳೀಯ ಕರನಂದಿ ರಂಗಮಂದಿರದಲ್ಲಿ ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿಸಭೆಯಲ್ಲಿ ಅವರು ಮಾತನಾಡಿದರು. ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ಪುರಸಭೆ ಚುನಾವಣೆ ಗುಳೇದಗುಡ್ಡದ ಭವಿಷ್ಯವನ್ನು ನಿರ್ಧರಿಸಲಿದ್ದು, ಕಾಂಗ್ರೆಸ್ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ಎಲ್ಲ ಕಾರ್ಯಕರ್ತರು, ಹಿರಿಯರು ಒಗ್ಗಟ್ಟಾಗಿ ಶ್ರಮಿಸಬೇಕು. ಈ ಬಾರಿ ಗುಳೇದಗುಡ್ಡ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಮಾಜಿ ಸಿಎಂ. ಸಿದ್ದರಾಮಯ್ಯನವರು ಬಾದಾಮಿ ಮತಕ್ಷೆÃತ್ರಕ್ಕೆ ಶಾಸಕರಾಗಿ ದೊರೆತಿರುವುದು ನಮ್ಮೆಲ್ಲರ ಪುಣ್ಯ. ಪುರಸಭೆ ಚುನಾವಣೆಗೆ ಅವರು ಮಾರ್ಗದರ್ಶನ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ಗುಳೇದಗುಡ್ಡದ ಜನ ಗುಳೇ ಹೋಗದಂತೆ ಅಭಿವೃದ್ಧಿ ಪಡಿಸಲಿದ್ದು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸರಸ್ವತಿ ಮೇಟಿ, ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಕೆಪಿಸಿಸಿ ಕಾರ್ಯದರ್ಶಿ ಪಾರಸ್ಮಲ್ ಜೈನ, ಕಮಲಮ್ಮ ಮರಿಸ್ವಾಮಿ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಎಂ.ಬಿ. ಹಂಗರಗಿ, ಕಲಬುರ್ಗಿ, ಅಡಿವೆಪ್ಪ ತಾಂಡೂರ, ವಾಯ್.ಆರ್. ಹೆಬ್ಬಳ್ಳಿ, ಮಲ್ಲಣ್ಣ ಯಲಿಗಾರ, ನಾಗಪ್ಪ ಗೌಡರ, ಡಾ. ಬಸವರಾಜ ಕೋಲಾರ, ಈಶ್ವರಪ್ಪ ರಾಜನಾಳ, ಪ್ರಕಾಶ ಮೇಟಿ, ರಾಜು ಸಂಗಮ, ಹಣಮಂತ ಗೌಡರ, ವಿನೋದ ಮದ್ದಾನಿ, ಮುಬಾರಕ ಮಂಗಳೂರ, ರಫಿಕ್ ಕಲಬುರ್ಗಿ, ಎಂ.ಎಂ. ಜಮಖಾನಿ, ರವಿ ಗೌಡರ, ಎನ್.ಎಂ ಯಾನಮಶೆಟ್ಟಿ, ಸಂಗಣ್ಣ ಹಂಡಿ, ಮತ್ತಿತರರು ಇದ್ದರು.

loading...