ಕಾಮಗಾರಿಗೆ ಚಾಲನೆ

0
4
loading...

ಕಾಮಗಾರಿಗೆ ಚಾಲನೆ
ಕನ್ನಡಮ್ಮ ಸುದ್ದಿ-ಘಟಪ್ರಭಾ: ಮಲ್ಲಾಪೂರ ಪಿ.ಜಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಜಲ ಶುದ್ಧಿಕರಣ ಘಟಕದ ಕಾಮಗಾರಿಗೆ ದನಗಳ ಪೇಟೆಯಲ್ಲಿ ರವಿವಾರ ಚಾಲನೆ ನೀಡಲಾಯಿತು.
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಮಂಜೂರಾದ ಸುಮಾರು ೧ ಕೋಟಿ ೪೫ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಜಲ ಶುದ್ಧಿಕರಣ ಘಟಕಕ್ಕೆ ಶಿರಢಾಣ ಗ್ರಾಮದ ಘಟಪ್ರಭಾ ನದಿಯಿಂದ ಮಲ್ಲಾಪೂರ ಪಿ.ಜಿ ದನದ ಪೇಟೆವರೆಗೆ ೧೦ ಇಂಚ್ ಪೈಪ ಲೈನ್ ಅಲವಡಿಸಲಾಗುವುದು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಂ.ದಳವಾಯಿ, ಮಾರುತಿ ಹುಕ್ಕೆÃರಿ, ಈಶ್ವರ ಮಟಗಾರ, ಚಂದ್ರು ಕಾಡದವರ, ಮಾರುತಿ ಸಿಂದ್ರೆ, ಸುರೇಶ ಪೂಜಾರಿ, ಕೆಂಪಣ್ಣಾ ಚೌಕಶಿ, ಕಾಡಪ್ಪಾ ಕರೋಶಿ, ಪ್ರತಾಪ ಬೇವಿನಗಿಡದ, ಲಕ್ಷö್ಮಣ ಮೇತ್ರಿ, ನಾಗರಾಜ ಜಂಭ್ರಿ, ಪ.ಪಂ ಸದಸ್ಯರಾದ ಮಲ್ಲಪ್ಪ ಕೋಳಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಈರಗೌಡ ಕಲಕುಟಗಿ, ಪ್ರವೀಣ ಮಟಗಾರ, ಮಾರುತಿ ಹುಕ್ಕೆÃರಿ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು. ಗುತ್ತಿಗೆದಾರ ಅಶೋಕ ಹುಲಿಕಟ್ಟಿ, ಸೇರಿದಂತೆ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

loading...