ಕಾರ್ ಬಸ್ ಮುಖಾಮುಖಿ ಡಿಕ್ಕಿ ಓರ್ವ ಸಾವು

0
66
loading...

ಕಾರ್ ಬಸ್ ಮುಖಾಮುಖಿ ಡಿಕ್ಕಿ ಓರ್ವ ಸಾವು
ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿಯಿಂದ ಖಾನಾಪುರದತ್ತ ಹೊರಟಿದ್ದ ಸರಕಾರಿ ಬಸ್ಸಿಗೆ, ಎದುರಿನಿಂದ ವೇಗವಾಗಿ ಬಂದ ಸ್ವಿಪ್ಟ್ ಕಾರು ಮುಖಾಮುಖಿ ಗುದ್ದಿದ್ದರಿಂದ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿ ಸಾವನೊಪ್ಪಿದ್ದಾನೆ.
ಸೋಮವಾರ ಮಧ್ಯಾಹ್ನ ಖಾನಾಪುರ ರಸ್ತೆಯ ಇದ್ದಿಲಹೊಂಡ ಬಳಿ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಓರ್ವ ಸ್ಥಳದಲ್ಲಿ ಸಾವು,ಮೂವರ ಸ್ಥಿತಿ ಚಿಂತಾ ಜನಕವಾಗಿದೆ.ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...