ಕಿಶಾನಗರದಲ್ಲಿ ಮುಜುಗರ ಅನುಭವಿಸಿದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ!

0
35
loading...

ಬೆಂಗಳೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಮತ್ತು ಪುತ್ರ ಹೆಚ್.ಡಿ. ಕುಮಾರಸ್ವಾಮಿ ಸಮೇತ ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್‍ಗೆ ರಾಜಸ್ಥಾನದ ಕಿಶಾನಗರದಿಂದ ಟೇಕ್ ಆಫ್‍ಗೆ ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ದೇವೇಗೌಡರ ಕುಟುಂಬ ಮುಜುಗರ ಅನುಭವಿಸಿದಂತಹ ಘಟನೆ ನಡೆದಿದೆ.
ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ದೇವೇಗೌಡರ ಕುಟುಂಬ ಅಲ್ಲಿಂದ 30 ಕಿ.ಮೀ ದೂರದಲ್ಲಿರುವ ಕಿಶಾನಗರ ವಿಮಾನ ನಿಲ್ದಾಣಕ್ಕೆ ಪತ್ನಿ ಚೆನ್ನಮ್ಮ ಸಮೇತ ದೇವೇಗೌಡರು ಗುರುವಾರ ಸಂಜೆ ಆಗಮಿಸಿದ್ದರು.ಈ ವೇಳೆ ಏರ್‍ಪೋರ್ಟ್ ಮ್ಯಾನೇಜರ್ ಶುಲ್ಕ ಪಾವತಿಸದ ಹಿನ್ನೆಲೆ ಅವರ ಹೆಲಿಕಾಪ್ಟರ್ ಟೇಕ್ ಆಫ್‍ಗೆ ಅವಕಾಶ ನೀಡಿರಲಿಲ್ಲ.
ಖಾಸಗಿ ಹೆಲಿಕಾಪ್ಟರ್ ಶುಲ್ಕವನ್ನು ಮುಂಗಡ ಪಾವತಿಸಬೇಕೆಂದು ಹೇಳಿದ್ದಾರೆ.ಬಳಿಕ ಆನ್‍ಲೈನ್ ಮೂಲಕ ಶುಲ್ಕ ಪಾವತಿ ಮಾಡಲು 20ನಿಮಿಷ ಕಾದಿದ್ದಾರೆ.ಬಳಿಕವಷ್ಟೇ ಸಿಎಂ ಹಾಗೂ ಮಾಜಿ ಸಿಎಂ ಕಿಶಾನಗರ ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿ ನೀಡಲಾಗಿದೆ.

loading...