ಕುಡಿದ ಮತ್ತಿನಲ್ಲಿ ಜೀವಂತ ಕೋಳಿಯನ್ನೇ ತಿಂದ…!

0
84
loading...

ಕುಡಿದ ವ್ಯಕ್ತಿಗೆ ಸರಿ-ತಪ್ಪು ಗೊತ್ತಾಗೊದಿಲ್ಲ ಎನ್ನುವ ಮಾತಿದೆ. ಮದ್ಯದ ಮತ್ತಿನಲ್ಲಿ ವ್ಯಕ್ತಿ ಯಡವಟ್ಟು ಮಾಡಿಕೊಳ್ಳೋದು ಹೆಚ್ಚು. ಇದಕ್ಕೆ ತೆಲಂಗಾಣದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ.
ತೆಲಂಗಾಣದ ಮೆಹಬೂಬಾಬಾದ್ ನಲ್ಲಿ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಜೀವಂತ ಕೋಳಿಯನ್ನು ತಿಂದಿದ್ದಾನೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಶೆಯಲ್ಲಿದ್ದ ಇಬ್ಬರು ಚಿಕನ್ ಮಾಡಲು ಕೋಳಿ ಖರೀದಿ ಮಾಡಿದ್ದಾರೆ. ಆದ್ರೆ ಮನೆಗೆ ಹೋಗುವ ಶಕ್ತಿ ಅವ್ರಲ್ಲಿರಲಿಲ್ಲ. ರಸ್ತೆ ಮಧ್ಯೆಯೇ ಮಲಗಿದ್ದಾರೆ.
ನಿದ್ರೆ ಗುಂಗಿನಲ್ಲಿದ್ದ ಒಬ್ಬ ಎಚ್ಚರಗೊಂಡಿದ್ದಾನೆ. ಹಸಿವಾದ ಕಾರಣ ಜೀವಂತ ಕೋಳಿಯನ್ನು ಕತ್ತರಿಸಿ ಹಸಿ ಮಾಂಸವನ್ನೇ ತಿಂದಿದ್ದಾನೆ. ದಾರಿಯಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬ ಇದ್ರ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

loading...