ಕುತೂಹಲಕ್ಕೆ ಕಾರಣವಾದ ಕುಟುಂಬ ರಾಜಕಾರಣ

0
39
loading...

ದೀಪಕ ಶೆಟ್ಟಿ
ಕಾರವಾರ: ಈ ಬಾರಿಯ ಇಲ್ಲಿನ ನಗರಸಭಾ ಚುನಾವಣೆಯಲ್ಲಿ ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಮಗಳು ಸೇರಿದಂತೆ ಮೂವರೂ ಪ್ರತ್ಯೆÃಕ ವಾರ್ಡ್ಗಳಲ್ಲಿ ಚುನಾವಣೆಯಲ್ಲಿ ಕಣಕ್ಕಿÃಳಿದಿದ್ದಾರೆ.

ಈ ‘ಕುಟುಂಬ ರಾಜಕಾರಣ’ ಸಾರ್ವಜನಿಕರ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸತೀಶ ಕೊಳಂಬಕರ್ ಆತನ ಪತ್ನಿ ಲಕ್ಷಿö್ಮÃ ಕೊಳಂಬಕರ್ ಮತ್ತು ಇವರ ಮಗಳು ಪೂರ್ಣಿಮಾ ಇವರೇ ಮೂವರು ಮೂರು ಪ್ರತ್ಯೆÃಕ ವಾರ್ಡ್ಗಳಲ್ಲಿ ಚುನಾವಣೆಗೆ ಸ್ಫರ್ಧಿಸಿದವರು. ಸತೀಶ್ ಹಾಗೂ ಲಕ್ಷಿö್ಮÃ ಇವರಿಬ್ಬರು ಬಿಜೆಪಿ ಕಾರ್ಯಕರ್ತರಾಗಿದ್ದು ಕಳೆದ ಚುನಾವಣೆಯಲ್ಲಿ ಸತೀಶ್ ಬೆರಳೆಣಿಕೆಯ ಅಂತರದಿಂದ ಸೋತಿದ್ದರೆ. ಪತ್ನಿ ಗೆದ್ದು ಎರಡನೇಯ ಬಾರಿಗೆ ಸತತ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಪತಿ ಮತ್ತು ಪತ್ನಿ ಇವರಿಬ್ಬರು ಸೇರಿದಂತೆ ಇವರ ಮಗಳೂ ಸಹ ಕ್ರಮವಾಗಿ ೨೦, ೨೨ ಮತ್ತು ೨೪ ನೇ ವಾರ್ಡಗಳಿಂದ ಚುನಾವಣೆಗೆ ಸ್ಫರ್ಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಈ ಬಾರಿಯ ಚುನಾವಣೆಯಲ್ಲಿ ತಾನು, ಪತ್ನಿ ಸೇರಿದಂತೆ ಮಗಳೂ ಸಹ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದೆÃವು. ಆದರೆ ಬಿಜೆಪಿ ಒಂದೇ ಕುಟುಂಬಕ್ಕೆ ಮೂರು ಟಿಕೇಟ್ ನೀಡಲು ನಿರಾಕರಿಸಿತು. ಕುಟುಂಬದ ಒಬ್ಬರಿಗೆ ಪತಿ ಅಥವಾ ಪತ್ನಿಗೆ ಮಾತ್ರ ಟಿಕೇಟ್ ನೀಡುವುದಾಗಿ ತಿಳಿಸಿತು. ಆದರೆ ನಾವು ನಮ್ಮ ಕುಟುಂಬದ ಒಗ್ಗಟ್ಟು ಪ್ರದರ್ಶಿಸುವ ಕಾರಣಕ್ಕಾಗಿ ಆ ಒಂದು ಟಿಕೇಟ್‌ನ್ನು ನಿರಾಕರಿಸಿದ್ದೆÃವೆ. ಬಿಜೆಪಿ ಟಿಕೇಟ್ ನಿರಾಕರಿಸಿದ್ದರಿಂದ ನಾವು ಮೂವರು ಸ್ವತಂತ್ರö್ಯವಾಗಿ ಸ್ಪರ್ಧಿಸಬೇಕಾಯಿತು ಎಂದರು. ನಮ್ಮ ಕುಟುಂಬದ ನಾವು ಮೂವರು ಪದವೀಧರರಾಗಿದ್ದೆÃವೆ.
ಈ ಹಿಂದೆ ನಮಗಿಬ್ಬರಿಗೂ ನಗರಸಭೆ ಸದಸ್ಯರಾಗಿ ಸಾರ್ವಜನಿಕರ ಸೇವೆ ಸಲ್ಲಿಸಿದ ಅನುಭವ ಸಹ ಇದೆ ಎನ್ನುವ ಸತೀಶ್ ಕೊಳಂಬಕರ್ ಪಕ್ಷಕ್ಕಾಗಿ ದುಡಿದ ನಮ್ಮನ್ನು ಬಿಜೆಪಿ ಕಡೆಗಣಿಸಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಗೌರವವಿಲ್ಲ ಎಂದು ಆರೋಪಿಸಿದ ಸತೀಶ್ ಬಿಜೆಪಿಗಾಗಿ ಕಳೆದ ೨೫ ವರ್ಷಗಳಿಂದ ದುಡಿದು ಕೆಳ ಮಟ್ಟದಿಂದ ಪಕ್ಷ ಕಟ್ಟಲು ಶ್ರಮ ಹಾಕಿದ್ದೆÃನೆ. ಆದರೆ ಗೆಲ್ಲುವ ಸಾಮರ್ಥ್ಯವಿರುವ ಹಳೆಬರನ್ನು ಕಡೆಗಣಿಸಿ ಹೊಸಬರಿಗೆ ಪಕ್ಷದಲ್ಲಿ ಮಣೆ ಹಾಕಲಾಗಿದೆ ಎಂದು ಅವರು ಆರೋಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಧಿಕೃತ ಅಭ್ಯರ್ಥಿಗಳು ತಮ್ಮ ಪತ್ನಿಯರನ್ನು ತಮ್ಮ ಪಕ್ಕದ ವಾರ್ಡ್ಗಳಲ್ಲಿ ಪಕ್ಷೆÃತರರಾಗಿ ಕಣಕ್ಕಿÃಳಿಸಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಇವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ನಾವು ಸಹ ಕುಟುಂಬದ ಸದಸ್ಯರೊಬ್ಬರು ಬಿಜೆಪಿ ಟಿಕೇಟ್ ಪಡೆದು ಇನ್ನಿಬ್ಬರನ್ನು ಪಕ್ಷೆÃತರರಾಗಿ ಕಣಕ್ಕಿÃಳಿಸಬಹುದಿತ್ತು. ಆದರೆ ನಾವು ಪಕ್ಷಕ್ಕೆÃ ದ್ರೊÃಹ ಬಗೆಯದೇ ಮೂವರು ಪಕ್ಷೆÃತರರಾಗಿ ಸ್ಪರ್ಧಿಸಿದ್ದೆÃವೆ ಎಂದು ಲಕ್ಷಿö್ಮÃ ಕೊಳಂಬಕರ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಬಿಜೆಪಿಯ ಮೂಲಗಳು ಹೇಳುವುದೇ ಬೇರೆ. ಕೆಲವರು ನಗರಸಭಾ ಸದಸ್ಯರಾಗಿ ಸ್ವಂತ ಗುತ್ತಿಗೆ ಪಡೆಯವುದು ಹಾಗೂ ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳಲ್ಲಿ ಪರ್ಸೆಂಟೆಜ್ ಪಡೆದು ಸುಲಭವಾಗಿ ಹಣ ಮಾಡಬಹುದೆಂಬ ದುರುದ್ದೆÃಶದಿಂದ ಚುನಾವಣಾ ಕಣಕ್ಕಿÃಳಿಯುತ್ತಾರೆ. ಇದು ಭ್ರಷ್ಟಾಚಾರವಲ್ಲದೆ ಮತ್ತೆÃನಲ್ಲ.

ಅದರಂತೆ ಕೆಲವರು ತಾವು ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿÃಳಿಸಿ ನಗರಸಭೆಯಿಂದ ತಮ್ಮ ಆದಾಯವನ್ನು ಡಬಲ್, ತ್ರಿಬಲ್ ಮಾಡಿಕೊಳ್ಳುವ ದುರಾಲೋಚನೆ ಹೊಂದಿದಂಥವರು. ಚುನಾವಣೆಯಲ್ಲಿ ಗೆಲ್ಲುವುದು ಸಾರ್ವಜನಿಕರ ಸೇವೆ ಮಾಡಲು ಹೊರತು ಹಣ ಮಾಡುವುದಕ್ಕಲ್ಲ ಎಂಬುದನ್ನು ಟಿಕೇಟ್ ಆಕಾಂಕ್ಷಿಗಳು ಅರಿಯಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಟಿಕೇಟ್ ಇದು ಪಕ್ಷದ ತತ್ವ. ಗೆಲುವಿನ ಸಾಮರ್ಥ್ಯವಿರುವವರಿಗೆ ಮಾತ್ರ ಟಿಕೇಟ್ ನೀಡಲಾಗಿದ್ದು ಪಕ್ಷದ ಸದಸ್ಯರಾಗಿದ್ದುಕೊಂಡು ಪಕ್ಷೆÃತರರಾಗಿ ಸ್ಪರ್ಧೆಗಿಳಿದವರು ಕೂಡಲೇ ಕಣದಿಂದ ಹಿಂದೆ ಸರಿಯಬೇಕು ಇಲ್ಲದಿದ್ದರೆ ಅಂಥವರ ಮೇಲೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ.

loading...