ಕುತೂಹಲ ಮೂಡಿಸಿದ ಕಾಶ್ಮೀರ ವಿವಾದ ಬಗೆಹರಿಕೊಳ್ಳುವ ಪ್ರಸ್ತಾವನೆ

0
5
loading...

ಇಸ್ಲಾಮಾಬಾದ್: ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಸ್ತಾವನೆಯೊಂದನ್ನು ತಾವು ಸಿದ್ಧಪಡಿಸಿರುವುದಾಗಿ ಪಾಕಿಸ್ತಾನದ ಮಾನವ ಹಕ್ಕುಗಳ ಇಲಾಖೆ ಸಚಿವೆ ಶಿರೀನ್ ಮಝಾರಿ ಹೇಳಿದ್ದಾರೆ.
ಶಿರೀನ್ ಮಝಾರಿ ಪಾಕಿಸ್ತಾನದ ಸೇನೆ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಈಗ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಸ್ತಾವನೆಯನ್ನು ಸಿದ್ಧಪಡಿಸಿರುವುದಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.
ತಮಗಿರುವ ಸೇನೆಯೊಂದಿಗಿನ ಉತ್ತಮ ಬಾಂಧ್ಯದಿಂದಾಗಿ ಶಿರೀನ್ ಮಝಾರಿ ಪಾಕಿಸ್ತಾನದ ರಕ್ಷಣಾ ಸಚಿವರಾಗುತ್ತಾರೆ ಎಂಬ ಊಹಾಪೋಹಗಳೂ ಇತ್ತು. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಿರೀನ್ ಮಝಾರಿ, ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ತಾವು ದೀರ್ಘಕಾಲದಿಂದ ಪ್ರಸ್ತಾವನೆಯೊಂದಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿದ್ದು, ಈಗ ಅದು ಪೂರ್ಣಗೊಂಡಿದೆ, ಈ ಪ್ರಸ್ತಾವನೆಯನ್ನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸಚಿವ ಸಂಪುಟದ ಎದುರು ಮಂಡಿಸಲಾಗುವುದು, ಒಪ್ಪಿಗೆ ದೊರೆತರೆ ಪ್ರಸ್ತಾವನೆಯೊಂದಿಗೆ ಮುಂದುವರೆಯೋಣ ಎಂದು ಹೇಳಿದ್ದಾರೆ.
ಕ್ವಾಯ್ದ್-ಇ-ಅಜಮ್ ವಿಶ್ವವಿದ್ಯಾನಿಲಯದಲ್ಲಿ ರಕ್ಷಣಾ ಹಾಗೂ ಕಾರ್ಯತಂತ್ರಕ್ಕೆ ಸಂಬಂಧಿಸಿದ ಅಧ್ಯಯನ ವಿಷಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಮಝಾರಿ, ಕೆಲಕಾಲ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಟಿವಿ ಕಾರ್ಯಕ್ರಮದಲ್ಲಿ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ತಮ್ಮ ಬಳಿ ಪ್ರಸ್ತಾವನೆಯೊಂದು ಸಿದ್ಧವಿದೆ ಎಂದಷ್ಟೇ ಹೇಳಿದ್ದು ಹೆಚ್ಚಿನ ವಿವರಗಳನ್ನು ಮಝಾರಿ ನೀಡಿಲ್ಲ.

loading...