ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಭಯಪಡಬೇಕಿಲ್ಲ: ರಘುರಾಮ ರಾಜನ್

0
4
loading...

ನವದೆಹಲಿ: ಡಾಲರ್ ವಿರುದ್ಧ ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಭಯಪಡಬೇಕಿಲ್ಲ.ಪ್ರಸ್ತುತ ಇರುವ ಚಾಲ್ತಿ ಖಾತೆ ಕೊರತೆಯನ್ನ ಸರಿ ಪಡಿಸಿಕೊಂಡರೆ ರೂಪಾಯಿ ತನ್ನಿಂದ ತಾನೇ ಬಲಗೊಳ್ಳುತ್ತದೆ ಎಂದು ಆರ್‍ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ.
ಕಳೆದ ವಾರ ಡಾಲರ್‍ವಿರುದ್ಧ ರೂಪಾಯಿ ಮೌಲ್ಯ 70.32ಪೈಸೆಗೆ ಕುಸಿದಿತ್ತು.ಅದೀಗ ಚೇತರಿಸಿಕೊಂಡಿದ್ದು, 69.91ಕ್ಕೆ ತಲುಪಿದೆ.
ನವದೆಹಲಿಯಲ್ಲಿ ಮಾತನಾಡಿದ ಅವರು,ಭಾರತ ಸರ್ಕಾರ ತನ್ನ ಚಾಲ್ತಿ ಖಾತೆ ಕೊರತೆ ನೀಗಿಸಿಕೊಂಡರೆ ಎಲ್ಲವೂ ಸರಿಹೋಗು ತ್ತದೆ.ಅಲ್ಲದೇ ಹಣಕಾಸು ಕೊರತೆಯನ್ನು ಸಹ ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.ವಿಶೇಷ ಎಂದರೆ ಇದರಲ್ಲಿ ಕಚ್ಚಾತೈಲ ಬೆಲೆ ಏರಿಕೆ ಬಹಳಷ್ಟು ಕೊಡುಗೆ ನೀಡಿದೆಯಲ್ಲದೇ,ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ತನ್ನ ಮೌಲ್ಯ ವೃದ್ಧಿಸಿಕೊಂಡಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್ ಹಾಗೂ ಭಾರತ ಚುನಾವಣೆಗೆ ತೆರಳುತ್ತಿರುವುದರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬೇ ಕಾಗಿರುವುದು ಅಗತ್ಯ ಎಂದೂ ಪ್ರತಿಪಾದಿಸಿದ್ದಾರೆ.
ರಘುರಾಮ್ ರಾಜನ್ ಅಮೆರಿಕದ ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯೂಸಿನೆಸ್‍ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

loading...