ಕೂಲಿ ಕಾರ್ಮಿಕರ ಕಾರ್ಡ ವಿತರಣೆಯ ಕಾರ್ಯ

0
16
loading...

ಕನ್ನಡಮ್ಮ ಸುದ್ಧಿ-ರೋಣ: ರಾಜ್ಯ ಸರ್ಕಾರವು ಜನತೆಯ ಯೋಗಕ್ಷೇಮದ ಕುರಿತು ಆಲೋಚನೆಯನ್ನು ಮಾಡುತ್ತಲಿದ್ದು, ಪ್ರತಿ ಕೂಲಿ ಕಾರ್ಮಿಕರು ನೆಮ್ಮದಿಯ ಜೀವನವನ್ನು ನಡೆಸುವಂತಾಗಬೇಕು. ಅದರಂತೆ ಮಕ್ಕಳ ಭವಿಷ್ಯತ್ತಿನಲ್ಲಿಯೂ ಕೂಡಾ ತೊಂದರೆಗಿಡಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರ ಕಾರ್ಡಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಲಿದೆ.
ತಾಲೂಕಿನ ಚಿಕ್ಕಮಣ್ಣೂರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರತಿ ಹಳ್ಳಿಗಳಿಗೆ ಕೂಲಿ ಕಾರ್ಮಿಕರ ಕಾರ್ಡಗಳನ್ನು ವಿತರಣೆಯ ಕಾರ್ಯವು ನಡೆಯುತ್ತಲಿದ್ದು, ಇದಕ್ಕಾಗಿ ಗ್ರಾಮಸ್ಥರು ಕೂಲಿ ಕಾರ್ಡನ್ನು ಪಡೆಯುವ ನಿಟ್ಟಿನಲ್ಲಿ ಹರಸಾಹಸವನ್ನೇ ಪಡಬೇಕಾಗಿದೆ.
ರಾಜ್ಯ ಸರ್ಕಾರದ ವಿನೂತನ ಯೋಜನೆಯಾದ ಕೂಲಿ ಕಾರ್ಮಿಕರ ಕಾರ್ಡ ಮುಂಬರುವ ದಿನಮಾನಗಳಲ್ಲಿ ಪ್ರತಿ ಕುಟುಂಬದ ಜನತೆಯು ಯಾವದೇ ರೀತಿಯಲ್ಲಿ ಬಳಲಬಾರದು. ಮಕ್ಕಳು ಯಾವದೇ ರೀತಿಯಿಂದ ವಂಚಿತವಾಗಬಾರದು ಎಂಬುದನ್ನು ಹೊಂದಿರುವ ರಾಜ್ಯ ಸರ್ಕಾರ ಮಹದಾಸೆಯಾಗಿದೆ.
ಈ ಯೋಜನೆಯಲ್ಲಿ ಸೌಲಭ್ಯಗಳ ಮಹಾಪೂರ ಈ ಕಾರ್ಡನ್ನು ಹೊಂದಿರುವ ಫಲಾನುಭವಿಯು ಸಾಕಷ್ಟು ಸರ್ಕಾರದ ಸೌಲಭ್ಯವನ್ನು ಪಡೆಯುವ ನಿಟ್ಟಿನಲ್ಲಿ ಶಕ್ತನಾಗುತ್ತಾನೆ ಎಂಬ ಮಾಹಿತಿಯು ಬಂದಿರುವ ಕಾರ್ಡಗಳನ್ನು ವಿತರಣಾಕಾರರದಿಂದ ತಿಳಿದುಬರುತ್ತದೆ.
ಸೌಲಭ್ಯಗಳು ದೊರೆಯಬಹುದೇ ? ಈ ಕಾರ್ಡಗಳನ್ನು ಪಡೆಯುವಂತಹ ಫಲನಾಭವಿಗಳಿಗೆ ನೀಡಿರುವ ಸೌಲಭ್ಯಗಳು ಪ್ರತಿ ಕಾರ್ಡದಾರರಿಗೆ ದೊರೆಯಬುದೇ ಎಂಬ ಪ್ರಶ್ನೆಯು ಎಲ್ಲರಲ್ಲಿ ಮೂಡಿದೆ. ಫಲಾನುಭವಿ ಮಕ್ಕಳಿಗೆ ವಿದ್ಯಾರ್ಥಿ ವೇತನ (3000), ಆರೋಗ್ಯ, ಅಫಘಾತ ವಿಮೆ (2ಲಕ್ಷ್ಯ), ಇಂತಹ ಹಲವಾರು ಯೋಜನೆಗಳು ಈ ಕಾರ್ಡಗಳಲ್ಲಿ ಮೂಢಲಾಗಿದೆ.
ಸಿಬ್ಭಂಧಿಯ ಕೊರತೆ: ಇಂತಹ ಮಹತ್ವವಾದ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ ಎಂಬುದನ್ನು ತಿಳಿದ ಜನತೆಯು ಕಾಡ್ನ್ನು ಪಡೆಯುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡಲು ಗ್ರಾಮಸ್ಥರು ಸಿಬ್ಬಂಧಿಯ ಹತ್ತಿರ ಮೂಗಿಬಿದ್ದು ಕಾರ್ಡ ಪಡೆಯುವ ತವಕ.

loading...