ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ

0
5
loading...

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ
ಕನ್ನಡಮ್ಮ ಸುದ್ದಿ-ಸುರೇಬಾನ: ಮನಿಹಾಳ-ಸುರೇಬಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಮೀಪದ ಮನಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನವಾರ ನಡೆದ ಚುನಾವಣೆಯಲ್ಲಿ ಶೇ ೮೭.೮೬ ರಷ್ಟು ಮತದಾನ ನಡೆಯಿತ್ತು. ಸಂಜೆ ೪.೩೦ ರಿಂದ ಪ್ರಾರಂಭವಾದ ಮತ ಎಣಿಕೆ ರಾತ್ರಿ ೧೦.೦೦ರ ಸುಮಾರಿಗೆ ಮುಕ್ತಾಯಗೊಂಡಿತ್ತು.
೧೨ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಬೇಕಾದ ಸ್ಥಾನಕ್ಕೆ, ಒಟ್ಟು ೨೬ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಸಾಮಾನ್ಯ ಸಾಲಗಾರ ಸದಸ್ಯರಾದ ಭಾಜಪಾ ದ ಸಂಗನಗೌಡ ಮ ಪಾಟೀಲ, ಮೈಲಾರಪ್ಪ ಹ ಶಿರಿಯಣ್ಣವರ, ಬಸಪ್ಪ ಬೈ ಮದಕಟ್ಟಿ. ಹಿದುಳಿದ ಪ್ರ.ವರ್ಗ ಸಾಲಗಾರ ಸದಸ್ಯರಾದ ನಿಂಗನಗೌಡ ಸೊ ಈರನಗೌಡ್ರ, ಮಹಿಳಾ ಸಾಲಗಾರರ ಸದಸ್ಯರಾದ ರಾಜೇಶ್ವರಿ ಮ ಮೇಟಿ, ನೀಲವ್ವ ಬ ಬನನ್ನವರ. ಪರಿಶಿಷ್ಟ ಜಾತಿ ಸಾಲಗಾರರ ಸದಸ್ಯ ಪಡಿಯಪ್ಪ ಹ ಭಜಂತ್ರಿ, ಪರಿಶಿಷ್ಟ ಪಂ. ಸಾಲಗಾರರ ಸದಸ್ಯೆ ಶಾಂತಾಬಾಯಿ ಕೆ ಬೊಮ್ಮಣ್ಣವರ, ಸಾಲೆತರ ಸದಸ್ಯ ಬಸಪ್ಪ ಪು ಕಠಾರಿ ೯ ಜನ ಅಭ್ಯರ್ಥಿಗಳು ಜಯವನ್ನು ಸಾದಿಸಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನ ಸಾಮಾನ್ಯ ಸಾಲಗಾರ ಸದಸ್ಯರಾದ ಬಸವರಾಜ ಬ ಹಿರೇರಡ್ಡಿ, ಗಂಗಪ್ಪ ಮ ಜಾಲಿಹಾಳ. ಹಿಂದುಳಿದ ಪ್ರ.ವರ್ಗ ಸಾಲಗಾರರ ಸದಸ್ಯ ಶಿವಬಸಪ್ಪ ಬ ಗಾಣಿಗೇರ ೩ ಜನ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿ ತಮ್ಮ ಕೈ ಹಿಡಿಯಬೇಕಾದ ಸಂಘದಿಂದ ವಂಚಿತರಾಗಿದ್ದಾರೆ.
ಚುನಾವಣಾ ಅಧಿಕಾರಿ ಎಸ್.ವ್ಹಿ.ಹೊಂಗಲ ಮತ ಎಣಿಕೆ ನಂತರ ಜಯಗಳಸಿದ ಅಭ್ಯರ್ಥಿಗಳ ಅಧಿಕೃತ ಘೋಷಣೆ ಮಾಡಿದರು. ರಾಮದುರ್ಗ ಪಿಎಸ್‌ಐ ರಾಮನಗೌಡ ಸಂಕನಾಳ, ಸುರೇಬಾನ ಉಪ ಪೊಲೀಸ್ ಠಾಣೆಯ ಹವಾಲ್ದಾರ ಬಿ.ಕೆ. ರಂಗಣ್ಣವರ ತಮ್ಮ ಸಿಬ್ಬಂದಿ ಜೊತೆ ಇದ್ದು ಶಾಂತಿ ಕದಡದಂತೆ ಸುಕ್ತ ಬಂದೋಬಸ್ತ ಮಾಡಿದರು. ಸೋಮವಾರ ಸಮೀಪದ ಅವರಾದಿಯ ಶ್ರಿÃ ಬಸವೇಶ್ವರ ದೇವಸ್ಥಾನ ಮತ್ತು ಶ್ರಿÃಫಲಾಹಾರೇಶ್ವರ ಮಠಕ್ಕೆ ತರಳಿ ಶಿವಮೂರ್ತಿ ಸ್ವಾಮಿಜೀಯವರ ಆಶಿರ್ವಾದವನ್ನು ಭಾಜಪಾದ ಅಭ್ಯರ್ಥಿಗಳು ಪಡೆದರು.

loading...