ಕೆಪಿಎಲ್‍ಗೆ ವರುಣ ಅಡ್ಡಿ: ಮೈಸೂರಿಗೆ ಟೂರ್ನಿ ಶಿಪ್ಟ್

0
4
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ವರುಣನ ವಕ್ರದೃಷ್ಟಿ ಕೆಪಿಎಲ್‍ಗೆ ಬಿದ್ದಂತೆ ಕಾಣುತ್ತಿದೆ. ವಾಣಿಜ್ಯ ನಗರದಲ್ಲಿ ನಡೆಯುತ್ತಿರುವ ಕೆಪಿಎಲ್ ಟೂರ್ನಿಗಳನ್ನು ಮಳೆಯಿಂದ ರದ್ದುಗೊಳಿ ಸುತ್ತಾ ಬಂದಿದ್ದು ಈಗ ಸದ್ಯ ನಡೆಯುವ ಪಂದ್ಯಗಳನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಪಿಎಲ್ ಪಂದ್ಯಗಳಿಗೆ ಅಡ್ಡಿ ಪಡಿಸುತ್ತಿರುವ ಕಾರಣ ತಂಡಗಳು ಸಂಕಷ್ಟಕ್ಕೆ ಸಿಲುಕಿವೆ. ಒಟ್ಟು ಏಳು ತಂಡಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ ನೌಕೌಟ್ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹುಬ್ಬಳ್ಳಿ ಆವೃತ್ತಿಗೆ ಪಂದ್ಯಗಳು ಎಲ್ಲ ತಂಡಗಳಿಗೂ ಮಹತ್ವವಾಗಿವೆ. ಮಳೆಯ ಕಾಟ ಹೆಚ್ಚಾಗಿ ಪಂದ್ಯ ರದ್ದಾಗುತ್ತಿರುವುದರಿಂದ ಎಲ್ಲ ತಂಡಗಳಿಗೆ ತಲೆನೊವಾಗಿ ಪರಿಣಮಿಸಿದೆ. ನಗರದ ರಾಜನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಕ್ರೀಡಾಂಗಣದಲ್ಲಿ ಒಟ್ಟು 11 ಪಂದ್ಯಗಳು ಆಯೋಜನೆಯಾಗಿವೆ. ಇದರಲ್ಲಿ ಮಂಗಳವಾರ ಬಿಜಾಪುರ ಬುಲ್ಸ್ ಬೆಳಗಾವಿ ಪ್ಯಾಂಥರ್ಸ್ ಮತ್ತು ಬುಧವಾರ ಹುಬ್ಬಳ್ಳಿ ಟೈಗರ್ಸ್ ಬಳ್ಳಾರಿ ಟಸ್ಕರ್ಸ್ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದೆ. ನಾಲ್ಕೂ ತಂಡಗಳು ಒಂದು ಪಾಯಿಂಟ್ಸ್ ಹಂಚಿಕೊಂಡಿದ್ದು, ನಾಕೌಟ್ ತಲುಪಲು ಮತ್ತಷ್ಟು ತುರುಸಿನ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡ ತಲಾ ಒಂದು ಪಂದ್ಯಗಳಲ್ಲಿ ಗೆಲುವು ಪಡೆದಿದ್ದು ತಲಾ ನಾಲ್ಕು ಪಾಯಿಂಟ್ಸ್ ಹೊಂದಿವೆ. ಇಲ್ಲಿ ಬಳ್ಳಾರಿ ಟಸ್ಕರ್ಸ್ ಎದುರು ಇಲ್ಲಿ ಜಯ ಪಡೆದಿರುವ ಮೈಸೂರು ವಾರಿಯರ್ಸ್ ತಂಡ ಎರಡು ಪಾಯಿಂಟ್ಸ್ ಹೊಂದಿದೆ. ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್ ಒಂದು ಪಾಯಿಂಟ್ಸ್ ಕಲೆ ಹಾಕಿವೆ. ಆದರೆ, ಬಳ್ಳಾರಿ ಮತ್ತು ಲಯನ್ಸ್ ತಂಡಗಳಿಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ನಗರದಲ್ಲಿ ಒಂದೂವರೆ ತಿಂಗಳಿಂದ ನಿರಂತರ ಮಳೆ ಬರುತ್ತಿದೆ. ಇದರಿಂದ ಇಲ್ಲಿ ಕೆಪಿಎಲ್ ಪಂದ್ಯಗಳು ನಡೆಯುವುದೇ ಅನುಮಾನವಿತ್ತು. ಆದರೆ, ಮೊದಲ ದಿನ ಸುಸೂತ್ರವಾಗಿ ಪಂದ್ಯ ನಡೆದಿದ್ದರಿಂದ ಉಳಿದ ಪಂದ್ಯಗಳು ಕೂಡ ನಡೆಯಬಹುದು ಎನ್ನುವ ಅಶಾವಾದ ಮೂಡಿತ್ತು. ಇದಕ್ಕೆ ವರುಣ ಅವಕಾಶವೇ ಕೊಡುತ್ತಿಲ್ಲ. ಶತಾಯು ಗತಾಯು ಪಂದ್ಯ ನಡೆಸಲೇಬೇಕೆಂದು ಕೆಎಸ್‍ಸಿಎ ಸಿಬ್ಬಂದಿ, ಪಿಚ್ ಕ್ಯುರೇಟರ್ ಸಾಕಷ್ಟು ಪ್ರಯತ್ನಿಸಿ ಮೈದಾನದಲ್ಲಿದ್ದ ತೇವ ಕಡಿಮೆ ಮಾಡುವ ಪ್ರಯತ್ನ ಮಾಡಿದರು. ವೀಕ್ಷಕ ವಿವರಣೆ ನೀಡಲು ಬಂದಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜಾನ್ಸ್ ಕೂಡ ಮೈದಾನಕ್ಕೆ ಬಂದು ಪಿಚ್ ಸಜ್ಜುಗೊಳಿಸಲು ಮಾರ್ಗದರ್ಶನ ನೀಡಿದರು.

loading...