ಕೇರಳ ಮಳೆಗೆ 400ಕ್ಕೂ ಹೆಚ್ಚು ಬಲಿ: 8 ಲಕ್ಷ ಜನ ನಿರಾಶ್ರಿತ, ನಿಲ್ಲದ ಮಳೆ ಮುನಿಸು

0
6
loading...

ತಿರುವನಂತಪುರ: ವರುಣದೇವನ ಮುನಿಸು ಇನ್ನೂ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಭಾರತೀಯ ನೌಕಾದಳ ತ್ರಿಶೂರ್ನಲ್ಲಿ ಇಂದು 109 ಜನರನ್ನ ರಕ್ಷಣೆ ಮಾಡಿದೆ.

10 ಸಾವಿರ ಕಿ.ಮೀ. ಮಹಾಮಳೆಗೆ ಕೊಚ್ಚಿಹೋಗಿದೆ. 724,649 ಮಂದಿ ಸುಮಾರು 5,645 ರಕ್ಷಣಾ ಕ್ಯಾಂಪ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಮಾತನಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಕೊನೆ ವ್ಯಕ್ತಿಗೂ ರಕ್ಷಣೆ ದೊರೆಯಲಿದೆ ಎಂದು ವಾಗ್ದಾನ ಮಾಡಿದ್ದಾರೆ.

ಸೋರ್ನಾಪುರ ರೈಲ್ವೆ ಜಕ್ಷಂನ್ನಿಂದ ರೈಲುಗಳ ಸಂಚಾರ ಆರಂಭವಾಗಿದೆ. ನಿಜಾಮುದ್ದೀನ್ – ಎರ್ನಾಕುಲಂ ಮಂಗಲ್ ಲಕ್ಷದ್ವೀಪ ಎಕ್ಸ್ಪ್ರೆಸ್, ಮಂಗಳೂರು – ನಾಗೇಕೊಯ್ಲ ಪರಶುರಾಮ್ ಎಕ್ಸ್ಪ್ರೆಸ್ , ಜಾಮನಗರ್ – ತಿರುನಲ್ವೇಲಿ ರೈಲುಗಳು ಸಂಚಾರ ಆರಂಭಿಸಿವೆ.

ಈ ನಡುವೆ ಸಂಪೂರ್ಣವಾಗಿ ಕೈಕೊಟ್ಟಿರುವ ವಿದ್ಯುತ್ ಸರಿಪಡಿಸಲು ಕೇರಳಕ್ಕೆ ಪ್ಲಂಬರ್ಗಳನ್ನ ಆಹ್ವಾನಿಸಿಸಲಾಗಿದೆ. ಮೂಲೆಗುಂಪಾಗಿರುವ ವಿದ್ಯುತ್ ಸಂಪರ್ಕ ಸಾಧನಗಳ ಅಳವಡಿಕೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ಲಂಬರ್ಗಳ ಅವಶ್ಯಕತೆ ಇದ್ದು, ಅವರೆಲ್ಲ ಸಹಾಯಕ್ಕೆ ಧಾವಿಸುವಂತೆ ಕೇಂದ್ರ ಸಚಿವ ಕೆ.ಜೆ. ಆಲ್ಫೋನ್ಸ್ ಕರೆ ನೀಡಿದ್ದಾರೆ.

loading...