ಕೈ ಕೊಡುತ್ತಿರುವ ವಿದ್ಯುತ್: ದನ, ಕರುಗಳಿಗೆ ಸೀಗದ ನೀರು

0
5
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ಪ್ರಸಕ್ತ ವರ್ಷ ಮುಂಗಾರು ಮಳೆ ರೈತರಿಗೆ ಕೈಕೊಟ್ಟಿದ್ದಂತೆ ಮುಂಗಾರು- ಹಿಂಗಾರು ಮಳೆಯೂ ಬಾರದಿರುವುದು ಹಾಗೂ ವಿದ್ಯುತ್ ಸಮಸ್ಯೆಯಿಂದ ಈ ಭಾಗದ ರೈತರಲ್ಲಿ ಹೆಚ್ಚು ಆತಂಕಕಕ್ಕೆ ಆದರೂ ಇದರಿಂದ ದನ-ಕರುಗಳಿಗೆ ನೀರು ಹಾಗೂ ಮೇವಿನ ಕೊರತೆ ಉಂಟಾಗಿದ್ದು-ಇದರಿಂದ ರೈತರಲ್ಲಿ ಆತಂಕ ಉಂಟಾಗಿದೆ.

ಇನ್ನೂ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಳೆ ಇಲ್ಲದ ಕಾರಣ ಬಿತ್ತನೆ ಮಾಡಿದ ಎಲ್ಲಾ ಬೆಳೆÀಗಳು ಬೆಳೆಯಲು ಸಾಧ್ಯವಾಗದೇ ಒಣಗಿನಿಂತಿವೆ. ರೈತರು ಬಿತ್ತನೆಗಾಗಿ ಸಾಲ ಮಾಡಿದ ಕಾರಣ ಸಾಲ ತೀರಿಸಲು ಹೊರ ರಾಜ್ಯಕ್ಕೆ ಗುಳೇ ಹೋಗಬೇಕಾಗಿದೆ.
ಮಳೆಯನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಜಮೀನಿನಲ್ಲಿ ಬೇಸಾಯ ಮಾಡಿ ಜೀವನ ಸಾಗಿಸುವ ಬಡ ರೈತರಿಗೆ ಇದರಿಂದ ದಿಕ್ಕು ತೋಚದಂತಾಗಿದೆ. ಮಳೆ ಇಲ್ಲದೆ ಬಿತ್ತಿದ ಬೆಳೆಗಳು ಕೂಡಾ ಮೊಳಕೆಯಲ್ಲೇ ನಾಶವಾಗಿ ಹೋಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ರೈತರು ಮುಂದಿನ ಜೀವನಕ್ಕೇನು ಮಾಡಬೇಕು ಎಂಬ ತೊಳಲಾಟದಲ್ಲಿದ್ದಾರೆ. ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ಗುಳೇ ಹೋಗುವ ಮೂಲಕ ಜೀವನ ನಡೆಸುವ ಅನಿವಾರ್ಯದ ನಿರ್ಧಾರಕ್ಕೆ ಬಂದಿರುವ ರೈತರು ಗುಳೇ ಹೋಗಲು ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ರೈತರು ಗುಳೇ ಹೋಗದೆ ತಮ್ಮೂರಲ್ಲೇ ಇದ್ದು ದುಡಿಯಲಿ ಎಂಬ ಸದುದ್ದೇಶದಿಂದ ಕೇಂದ್ರ ಸರಕಾರ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಜಾರಿಗೆ ತಂದಿದೆ. ಆದರೆ ಈ ಯೋಜನೆ ಲಾಭವನ್ನು ಕೆಲವು ಶ್ರೀಮಂತರು ಪಡೆಯುತ್ತಿದ್ದಾರೆ, ಎಂಬ ಆರೋಪ ಕೇಳಿ ಬರುತ್ತಿದೆ. ಬಡ ರೈತರಿಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ. ಬಡ ಕೂಲಿ ಕಾರ್ಮಿಕರಿಗೆ ಇದರ ಲಾಭ ಕನಸಿನ ಮಾತಾಗಿದೆ. ಇನ್ನೂ ಇದರ ಬಗ್ಗೆ ಪ್ರಚಾರದ ಕೊರತೆ ಉಂಟಾಗಿರುವದರಿಂದ ಎಷ್ಟೋ ಜನರಿಗೆ ಇಂತಹದ್ದೊಂದು ಯೋಜನೆ ಇದೆ ಎಂಬುದೇ ಗೊತ್ತಿಲ್ಲ ಅಂತಾ ಈ ಭಾಗದ ಬಡ ರೈತರು ದೂರಿದ್ದಾರೆ.
ಮನೆಯಲ್ಲಿರುವ ದನಕರುಗಳಿಗೆ ಮೇವು ಹಾಕುವ ಸಾಮಥ್ರ್ಯ ಇಲ್ಲದೆ ಎಷ್ಟೋ ರೈತರು ತಮ್ಮ ದನಕರುಗಳನ್ನು ಮಾರಾಟ ಮಾಡಲು ಸಂತೆಗಳಿಗೆ ತರುತ್ತಿರುವದು ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ತೋರಿಸುತ್ತದೆ. ದನಕರುಗಳಿಗೆ ಮೇವಿನ ಹಾಗೂ ನೀರಿನ ವ್ಯವಸ್ಥೆಗಾಗಿ ಗೋಶಾಲೆ ಪ್ರಾರಂಭಿಸಬೇಕೆಂದು ಈ ಭಾಗದ ಜನಪ್ರತಿನಿಧಿಗಳಿಗೆ ಕೋರಿದ್ದಾರೆ. ಬರಗಾಲವನ್ನು ಸಮರ್ಥವಾಗಿ ಎದುರಿಸಲು ಹಾಗೂ ರೈತರು ಗುಳೇ ಹೋಗದಂತೆ ತಡೆದು, ಸರಕಾರ ಕೂಡಲೇ ಅತ್ಯಗತ್ಯ, ಕ್ರಮಗಳನ್ನು ಕೈಕೊಂಡು, ಅದಷ್ಟು ಬೇಗನೆ ಯೋಜನೆಗಳನ್ನು ಜಾರಿಗೆ ತಂದು, ಅದರ ಪ್ರಯೋಜನ ನೇರವಾಗಿ ಅರ್ಹ ಬಡ ರೈತರಿಗೆ ಮುಟ್ಟುವಂತೆ ಕ್ರಮ ಕೈಗೊಂಡರೆ ಮಾತ್ರ ರೈತರನ್ನು ಬರಗಾಲದ ಬವಣೆಯಿಂದ ತಪ್ಪಿಸುವುದು ಸಾಧ್ಯ ಎಂಬುದು ಪ್ರಜ್ಞಾವಂತರ ಮಾತು.

ಕೂಡಲೇ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಸರಕಾರ ಮುಂದಾಗಬೇಕು. ಜತೆಗೆ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ರೈತರಿಗೆ ನೀರು ನೀಡಬೇಕು ಹಾಗೂ ದನ-ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

loading...